India Languages, asked by mouryakrishnegowda, 6 months ago

kannada essay on dhasara​

Answers

Answered by aishwarya3521
1

Answer:

ದಸರಾ ಹಬ್ಬವು ಭಾರತದ ಅತ್ಯಂತ ಅರ್ಥಪೂರ್ಣ ಹಾಗು ದೊಡ್ಡ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ದೇಶದಾದ್ಯಂತ ಹಿಂದೂ ಧರ್ಮದ ಜನರು ಪ್ರತಿ ವರ್ಷ ಉತ್ಸಾಹ, ನಂಬಿಕೆ, ಪ್ರೀತಿ ಮತ್ತು ಗೌರವದಿಂದ ಆಚರಿಸುತ್ತಾರೆ. ದಸರಾ ಹಬ್ಬವನ್ನು ಆಚರಿಸುವುದಕ್ಕಾಗಿ ವಿದ್ಯಾರ್ಥಿಗಳಿಗೆ ಶಾಲೆ ಹಾಗು ಕಾಲೆಜುಗಳಿಂದ ತುಂಬ ದಿನಗಳ ರಜೆಯನ್ನು ಕೊಡಲಾಗಿರುತ್ತದೆ. ಈ ಹಬ್ಬವು ಪ್ರತಿ ವರ್ಷ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬರುವ ದೀಪಾವಳಿ ಹಬ್ಬದ ಎರಡು ಅಥವಾ ಮೂರು ವಾರಗಳ ಹಿಂದೆ ಬರುತ್ತದೆ. ಜನರು ಈ ಹಬ್ಬಕ್ಕಾಗಿ ಅತ್ಯಂತ ತಾಳ್ಮೆಯಿಂದ ಕಾಯುತ್ತಾರೆ.

ಭಾರತ ಸಂಸ್ಕೃತಿ, ಸಂಪ್ರದಾಯ, ಜಾತ್ರೆ ಹಾಗು ಹಬ್ಬಗಳಿಗೆ ಬಹಳ ಪ್ರಖ್ಯಾತಿ ಹೊಂದಿರುವ ದೇಶ. ಈ ದೇಶದ ಜನ ಪ್ರತಿ ಹಬ್ಬವನ್ನು ನಂಬಿಕೆ ಹಾಗು ಸಂತಸದಿಂದ ಆಚರಿಸುತ್ತಾರೆ. ಹಿಂದೂ ಹಬ್ಬಕ್ಕೆ ಪ್ರಾಮುಖ್ಯತೆ ಕೊಡುವುದಕ್ಕಾಗಿ ದಸರಾ ಹಬ್ಬವನ್ನು ರಾಜಪತ್ರಿತ ರಜೆಯನ್ನಾಗಿ ಘೋಷಿಸಲಾಗಿದೆ. ಹತ್ತು ತಲೆಗಳುಳ್ಳ ರಾಕ್ಷಸ ದೊರೆ ರಾವಣನನ್ನು ಹತ್ತನೆಯ ದಿನ ಸಂಹಾರ ಮಾಡಿದ ಶ್ರೀ ರಾಮನ ವಿಜಯದ ಸಂಕೇತವೇ ದಸರಾ ಹಬ್ಬ. ಹಬ್ಬದ ಹತ್ತನೆಯ ದಿನದಂದು ದೇಶದೆಲ್ಲೆಡೆ ರಾವಣನ ಪ್ರತಿಕೃತಿಯನ್ನು ದಹಿಸಲಾಗುತ್ತದೆ.

ಪುರಾಣಗಳಲ್ಲಿ ದಸರಾ:

ದೇಶದ ಹಲವು ಭಾಗಗಳಲ್ಲಿ ಜನರ ಸಂಸ್ಕೃತಿ ಹಾಗು ಸಂಪ್ರದಾಯಗಳಿಗೆ ಅನುಗುಣವಾಗಿ ಹಬ್ಬಕ್ಕೆ ಸಂಬಂಧಿತ ಹಲವಾರು ಕತೆಗಳಿವೆ. ಶ್ರೀ ರಾಮನು ರಾವಣಾಸುರನನ್ನು ಸಂಹಾರ ಮಾಡಿದ ದಸರಾ ದಿನದಂದು (ಹಿಂದೂ ಪಂಚಾಂಗದ ಪ್ರಕಾರ ಅಶ್ವಯುಜ ತಿಂಗಳ ಹತ್ತನೆಯ ದಿನದಂದು) ಹಬ್ಬವನ್ನು ಜನರು ಆಚರಿಸುತ್ತಾರೆ. ಸೀತಾ ಮಾತೆಯನ್ನು ಅಪಹರಿಸಿದ್ದಕ್ಕಾಗಿ ಹಾಗು ಅವರನ್ನು ಕಳುಹಿಸದಿದಕ್ಕಾಗಿ ಶ್ರೀ ರಾಮನು ರಾವಣನ ಸಂಹಾರ ಮಾಡುತ್ತಾನೆ. ಶ್ರೀ ರಾಮನು ಆತನ ಸಹೋದರ ಲಕ್ಷ್ಮಣ ಹಾಗು ವಾನರ ಸೈನ್ಯದ ಭಟ ಹನುಮಂತನ ಸಹಾಯದಿಂದ ರಾವಣನ ವಿರುದ್ಧ ಯುದ್ಧದಲ್ಲಿ ಜಯ ಸಾಧಿಸುತ್ತಾನೆ.

ಹಿಂದೂ ಧರ್ಮಗ್ರಂಥ ರಾಮಾಯಣದ ಪ್ರಕಾರ ಶ್ರೀ ರಾಮನು ದುರ್ಗಾ ಮಾತೆಯ ಆಶೀರ್ವಾದ ಪಡೆಯಲು ಚಂಡಿ ಹೋಮವನ್ನು ಮಾಡಿದನು ಎಂಬ ಉಲ್ಲೇಖವಿದೆ. ರಾವಣಾಸುರನನ್ನು ಯುದ್ಧದ ಹತ್ತನೆಯ ದಿನ ಸಂಹರಿಸುವ ರಹಸ್ಯ ಶ್ರೀ ರಾಮನಿಗೆ ಮೊದಲೇ ತಿಳಿದಿದ್ದರಿಂದ ಯುದ್ಧದಲ್ಲಿ ಜಯ ಸಾಧಿಸುವುದು ಸುಲಭವಾಯಿತು. ಇನ್ನೊಬ್ಬ ಅಸುರನಾದ ಮಹಿಷಾಸುರನನ್ನು ಇದೇ ಹತ್ತನೆಯ ದಿನದಂದು ದುರ್ಗಾ ಮಾತೆಯು ಸಂಹರಿಸಿದ್ದರಿಂದ ದಸರಾ ಹಬ್ಬಕ್ಕೆ ದುರ್ಗೊತ್ಸವ ಎಂದೂ ಸಹ ಕರೆಯಲಾಗುತ್ತದೆ.

ಮೈಸೂರು ದಸರಾ:

ಈ ಹತ್ತು ದಿನಗಳನ್ನು ಮೈಸೂರಿನಲ್ಲಿ ವಿಶೇಷ ರೀತಿಯಿಂದ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ.

ಕ್ರಿ.ಶ. ೧೬೪೦ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಗಿ, ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಜಂಬೂಸವಾರಿ ವೀಕ್ಷಣೆಗಾಗಿ ಆಗಮಿಸುತ್ತಾರೆ.

ಬೊಂಬೆ ಹಬ್ಬ:

ಮೈಸೂರು ಪ್ರಾಂತದಲ್ಲಿ ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿದ್ದು, ರಾಜ ರಾಣಿಯನ್ನು ದೇವರೆಂದೇ ಭಾವಿಸುವ ಕಾರಣ, ನವರಾತ್ರಿಯ ಕಾಲದಲ್ಲಿ ಪಟ್ಟದ ಬೊಂಬೆಗಳನ್ನು ಅಂದರೆ ರಾಜ ರಾಣಿಯರ ಬೊಂಬೆಯನ್ನು ಮನೆಯಲ್ಲಿ ಕೂರಿಸಿ ಪೂಜಿಸುವುದು ವಾಡಿಕೆ. ಈ ರಾಜಾ ರಾಣಿ ಬೊಂಬೆಗಳ ಜೊತೆಗೆ ಹಲವು ಬಗೆಯ ಬೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ, ಪ್ರತಿ ಸಂಜೆ ಆರತಿ ಮಾಡಿ ಬೊಂಬೆ ಬಾಗಿನ ನೀಡುವುದೂ ಸಂಪ್ರದಾಯಗಳಲ್ಲೊಂದು. ಹೀಗೆ ಬೊಂಬೆಗಳನ್ನು ಕೂರಿಸುವಾಗ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಹಾಗೂ ಹನುಮನ ಬೊಂಬೆಗಳನ್ನೂ ಇಡುತ್ತಾರೆ. ಶ್ರೀರಾಮ ಈ ಅವಧಿಯಲ್ಲೇ ರಾವಣನನ್ನು ಸಂಹರಿಸಿದ್ದು ಎನ್ನುವ ಕಾರಣದಿಂದ ರಾಮನ ಬೊಂಬೆಗಳನ್ನೂ ಇಡುತ್ತಾರೆ. ಕೆಲವರ ಮನೆಗಳಲ್ಲಿ ದಶಾವತಾರದ ಬೊಂಬೆಗಳನ್ನೂ ಕೂರಿಸುತ್ತಾರೆ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ದಸರೆ ಬೊಂಬೆಹಬ್ಬ ಎಂದೇ ಖ್ಯಾತಿ ಪಡೆದಿದೆ. ಸಂಜೆ ಕೋಲಾಟವೂ ಈ ಹಬ್ಬದ ವಿಶೇಷಗಳಲ್ಲೊಂದು.

ಸರಸ್ವತಿ ಹಬ್ಬದ ದಿನ ಬೊಂಬೆಗಳ ಜೊತೆಗೆ ಶಾರದೆಯ ಬೊಂಬೆಯನ್ನೂ ಕೂರಿಸಿ, ಕಳಶ ಇಟ್ಟು ಸೀರೆ ಉಡಿಸಿ ವಿಶೇಷವಾಗಿ ಪೂಜಿಸಲಾಗುತ್ತದೆ. ಅಂದು ಪುಸ್ತಕ, ಪೆನ್ಸಿಲ್, ರಬ್ಬರ್, ಪೆನ್ಗಳಿಗೂ ಪೂಜೆ ನಡೆಯುತ್ತದೆ. ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ನವರಾತ್ರಿಯಲ್ಲಿ ಪಾಡ್ಯದ ದಿನವೇ ಬೊಂಬೆಗಳ ಕೂರಿಸಿ ಪೂಜಿಸಲಾಗುತ್ತದೆ. ಹೆಣ್ಣು ಮಕ್ಕಳಿಲ್ಲದ ಕೆಲವರು ಶಾರದೆಯ ಹಬ್ಬದಿಂದ ತಮ್ಮ ಮನೆಗಳಲ್ಲಿ ಬೊಂಬೆ ಕೂರಿಸುತ್ತಾರೆ.

Hope it help you.....

Stay Tuned......

Similar questions