Kannada essay on teachers day
Answers
Explanation:
ಅಸಂಖ್ಯ ಮಕ್ಕಳ ಭವಿಷ್ಯ ರೂಪಿಸಿ, ಆ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಿದ ಶಿಕ್ಷರ ನೆನಕೆಗಾಗಿ ಸೆಪ್ಟೆಂಬರ್ 5 ಅನ್ನು ಭಾರತದಾದ್ಯಂತ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು
ಭಾರತದ ಮೊದಲ ಉಪರಾಷ್ಟ್ರಪತಿಯಾಗಿಯೂ, ಎರಡನೇ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ ಮಹಾನ್ ಶಿಕ್ಷಕ ಡಾ.ಸರ್ವಪಳ್ಳಿ ರಾಧಾಕೃಷ್ಣನ್ (5 ಸೆಪ್ಟೆಂಬರ್ 1888 - 17 ಏಪ್ರಿಲ್ 1975)ಅವರ ಗೌರವಾರ್ಥವಾಗಿ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಸಮಸ್ತ ಗುರುವೃಂದಕ್ಕೆ ನಮನ ಸಲ್ಲಿಸಲಾಗುತ್ತದೆ.
ಸರ್ವಪಳ್ಳಿ ರಾಧಾಕೃಷ್ಣನ್ ಸೆಪ್ಟೆಂಬರ್ 5, 1888 ರಲ್ಲಿ ತಮಿಳುನಾಡು-ಆಂಧ್ರಪ್ರದೇಶ ಗಡಿಯ ತಿರುತ್ತಣಿ ಎಂಬಲ್ಲಿ ಜನಿಸಿದರು. ತಂದೆ ಸರ್ವಪಳ್ಳಿ ವೀರಸ್ವಾಮಿ ಮತ್ತು ತಾಯಿ ಸೀತಮ್ಮ. 16 ನೇ ವಯಸ್ಸಿನಲ್ಲಿ ಶಿವಕಮು ಎಂಬುವವರನ್ನು ಮದುವೆಯಾದ ರಾಧಾಕೃಷ್ಣನ್ ಅವರಿಗೆ ಆರು ಮಕ್ಕಳಿದ್ದರು.
'ನಾನು ಮುಖ್ಯಮಂತ್ರಿಯಾಗಲು ಶಿಕ್ಷಕರೇ ಕಾರಣ'
ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ರಾಧಾಕೃಷ್ಣನ್ ಅವರ ಶಿಷ್ಯವೃಂದವೂ ಅಪಾರವಾಗಿತ್ತು. ಆಂಧ್ರ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದು ವಿವಿಯ ಉಪಕುಲಪತಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯು ಇವರದು. ರಾಧಾಕೃಷ್ಣನ್ ಅವರ ಶಿಷ್ಯರು ತಮ್ಮ ಗುರುವಿನ ಜನ್ಮದಿನವಾದ ಸೆಪ್ಟೆಂಬರ್ 5 ನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದರು.
ಈ ಕುರಿತು ರಾಧಾಕೃಷ್ಣನ್ ಅವರಲ್ಲಿ ಮನವಿಮಾಡಿಕೊಂಡಾಗ, ನನ್ನ ಜನ್ಮದಿನವನ್ನು ಆಚರಿಸುವ ಬದಲು ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೀರಾದರೆ ಅದಕ್ಕಿಂತ ದೊಡ್ಡ ಹೆಮ್ಮೆ ಇನ್ನೇನಿದೆ? ಎಂದು ಉತ್ತರಿಸಿದ್ದರು. ಅಂದಿನಿಂದಲೂ ಸೆ.5 ಶಿಕ್ಷಕರ ದಿನವಾಗಿ ಆಚರಣೆಗೊಳ್ಳುತ್ತಿದೆ.
Answer:
ʜɪ ᴍᴀᴛᴇ,
ʜᴇʀᴇ ɪs ʏᴏᴜʀ ᴀɴsᴡᴇʀ,
ʜᴏᴘᴇ ɪᴛ ʜᴇʟᴘs