India Languages, asked by pari200414, 1 year ago

kannada students only plsssssssss



Yoga and health. Kannada essay. Hurry


Plssssssssssssszzzzzzzzzzzzzzzzzzzzzzzzzzzzzzss ​


Prabhnoorsinghrehal: hi
Prabhnoorsinghrehal: priya
Prabhnoorsinghrehal: pari
pari200414: hi

Answers

Answered by gaurav200370
15

ಯೋಗ

ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ.ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.ಜೈನ ಧರ್ಮದಲ್ಲಿ ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು ಬಳಸುತ್ತಾರೆ.

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಯೋಗದ ಪ್ರಮುಖ ಶಾಖೆಗಳೆಂದರೆ ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮತ್ತು ಹಠ ಯೋಗ. ಪತಂಜಲಿಯ ಯೋಗಸೂತ್ರ ಗಳಲ್ಲಿ ಪ್ರಸ್ತಾಪವಾಗಿರುವ ಹಾಗೂ ಹಿಂದೂ ತತ್ವಶಾಸ್ತ್ರದ ಸಂದರ್ಭದಲ್ಲಿ ಸರಳವಾಗಿ ಯೋಗ ಎಂದೆನಿಸಿಕೊಳ್ಳುವ ರಾಜ ಯೋಗವು ಸಾಂಖ್ಯ ಸಂಪ್ರದಾಯಕ್ಕೆ ಸೇರಿದ್ದು. ಅನೇಕ ಇತರ ಹಿಂದೂ ಗ್ರಂಥಗಳು ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿದಂತೆ ಯೋಗದ ವಿವಿಧ ಮುಖ/ಮಗ್ಗಲುಗಳನ್ನು ಚರ್ಚಿಸುತ್ತವೆ.

ಸಂಸ್ಕೃತ ಪದ ಯೋಗ ವು ಅನೇಕ ಅರ್ಥಗಳನ್ನು ಹೊಂದಿದೆ,ಮತ್ತು ಆ ಪದವು "ನಿಯಂತ್ರಿಸುವ,", "ಐಕ್ಯವಾಗು" ಅಥವಾ "ಒಗ್ಗಟ್ಟಾಗು" ಎಂಬರ್ಥಗಳ ಸಂಸ್ಕೃತ ಮೂಲ "ಯುಜ್‌,"ನಿಂದ ವ್ಯತ್ಪನ್ನವಾಗಿದೆ.ಇದರ ರೂಪಾಂತರಗಳೆಂದರೆ "ಸೇರಿಸುವಿಕೆ," "ಜೊತೆಗೂಡುವಿಕೆ" "ಒಕ್ಕೂಟ" "ಸಂಯೋಗ," ಮತ್ತು "ನಿಮಿತ್ತ/ಉಪಕರಣ." ಭಾರತದ ಹೊರಗೆ, ಯೋಗ ಪದವನ್ನು ಸಾಮಾನ್ಯವಾಗಿ ಹಠ ಯೋಗ ಮತ್ತು ಅದರ ಆಸನಗಳನ್ನು ಸೂಚಿಸಲು (ಭಂಗಿಗಳು) ಅಥವಾ ವ್ಯಾಯಾಮದ ಒಂದು ರೂಪವಾಗಿ ಪರಿಗಣಿಸಲಾಗುತ್ತದೆ. ಯೋಗವನ್ನು ಅಭ್ಯಾಸ ಮಾಡುವವರು ಅಥವಾ ಯೋಗ ಸಿದ್ಧಾಂತವನ್ನು ಅನುಸರಿಸುವವರನ್ನು ಯೋಗಿ ಅಥವಾ ಯೋಗಿನಿ ಎಂದು ಕರೆಯುತ್ತಾರೆ.

for more refer the attachment ✌✌✌

Attachments:
Similar questions