India Languages, asked by jj0593656, 1 month ago

kattuhudu katina kedahudu sulabha gade​

Answers

Answered by Anonymous
1

Answer:

ಕಟ್ಟುವುದು ಕಠಿಣ-ಕೆಡಹುವುದು ಸುಲಭ:

ಗಾದೆ ವೇದಕ್ಕೆಸಮಾನ, ಗಾದೆ ಸುಳ್ಳಾದರೂ ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು.

ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ. ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಯೂ ಇಲ್ಲ. 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ" ಎಂಬ ಗಾದೆಯು ಇದೆ ಅರ್ಥವನ್ನು ಹೋಲುತ್ತದೆ. ಒಬ್ಬ ಕುಂಬಾರ

ಮಡಕೆಗಳನ್ನು ಮಾಡಲು ಮಣ್ಣು ತಂದು ಅರಳನ್ನು ಬೇರ್ಪಡಿಸಿ ಮಣ್ಣನ್ನು ಹದಮಾಡಿ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪಟ್ಟು ಸಾಕು. ಯಾವುದೇ ಒಂದು ಉತ್ತಮ ಕೆಲಸ ಮಾಡುವುದು ತುಂಬಾಕಠಿಣ. ಆದರೆ ಅದೇ ಕೆಲಸವನ್ನು ಹಾಳು ಮಾಡುವುದು ಸುಲಭ ಪ್ರಾಚೀನ ಭಾರತೀಯರು ಕಠಿಣ ಶ್ರಮವಹಿಸಿ ಭಾರತದ ಪ್ರಾಚೀನ ವಾಸ್ತುಶಿಲ್ಪಗಳನ್ನು ನಿರ್ಮಿಸಿದರು. ಆದರೆ ವಿದೇಶಿಯರು ಒಂದು ಕ್ಷಣಮಾತ್ರದಲ್ಲಿ ವಾಸ್ತುಶಿಲ್ಪಗಳನ್ನು ಕೆಡವಿ ಹಾಕಿದರು. ಹಾಗೆಯೇ ಮನುಷ್ಯ ತನ್ನ ಉತ್ತಮವಾದ ಜೀವನದ ಭವಿಷ್ಯವನ್ನು ನಿರ್ಮಿಸಲು ಜೀವನವೆಲ್ಲ ಕಷ್ಟಪಡಬೇಕು. ಆದರೆ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವುದಕ್ಕೆ ಒಂದರಗಳಿಗೆ ಸಾಕು.

ಒಂದು ಕೊಡ ಹಾಲು ಕೆಡಲು ತೊಟ್ಟು ಹುಳಿ ಸಾಕಲ್ಲವೇ? ಆದ್ದರಿಂದ ಮಾನವ ತನ್ನ ಘನತೆಯನ್ನರಿತು. ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರಸ್ತುತ ಗಾದೆಯು ತಿಳಿಸುತ್ತದೆ.

Similar questions