parisara rakshane namma hone prabandh in kannada
Answers
Answer:
hi where r u from Karnataka
Explanation:
ಈ ಲೇಖನದಲ್ಲಿ ಪರಿಸರ ಎಂದರೇನು?, ಪರಿಸರದ ಮಾಲಿನ್ಯಗಳು ಯಾವುವು?, ಪರಿಸರ ಸಂರಕ್ಷಣೆ ಎಂದರೇನು ಮತ್ತು ಅದನ್ನು ರಕ್ಷೆಣೆ ಹೇಗೆ ಎಂಬಿತ್ಯಾದಿಗಳ ಕುರಿತ ಮಾಹಿತಿಯನ್ನು ನೀವು ಪಡೆಯುವಿರಿ.
ಪರಿಸರ ಎಂದರೇನು?
ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ನಮ್ಮ ಸುತ್ತಮುತ್ತಲಿನ ಗಾಳಿ, ನೀರು, ಮರಗಿಡಗಳು, ಪ್ರಾಣಿಗಳು, ಮನುಷ್ಯರುಗಳೆಲ್ಲ ಪರಿಸರದ ಅಂಶಗಳು.
ಪರಿಸರ ಇಲ್ಲದೆ ಯಾವುದೇ ಜೀವನ ಸಾಗಲು ಸಾಧ್ಯವಿಲ್ಲ.
ಸೂಚನೆ: ನೀವು ಪ್ರಬಂಧವನ್ನು ಬರೆಯುವವರಾಗಿದ್ದರೆ ಪೀಠಿಕೆ, ವಿಷಯ ವಿವರಣೆ ಮತ್ತು ಉಪಸಂಹಾರಗಳೆಂದು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸುವುದುಗಾಗಿರುತ್ತದೆ.
ಓದಿ: ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು
ಪರಿವಿಡಿ
Parisara Samrakshane Prabandha In Kannada Language
ಪರಿಸರ ಸಂರಕ್ಷಣೆ ಎಂದರೇನು?
ವಿಶ್ವ ಪರಿಸರ ದಿನಾಚರಣೆ
ಪರಿಸರ ಸಂರಕ್ಷಣೆಯ ಘೋಷಣೆಗಳು
ಪರಿಸರ ಮಾಲಿನ್ಯ ನಿಯಂತ್ರಣ ಸಾಧನಗಳು/ವಿಧಾನಗಳು
ಪರಿಸರ ಸಂರಕ್ಷಣೆಯಲ್ಲಿ ಸಾಲುಮರದ ತಿಮ್ಮಕ್ಕ
Parisara Samrakshane Prabandha In Kannada Language
ಯಾವುದೇ ದೇಶಾಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಪರಿಸರ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಒಂದು ದೇಶ ದೊಡ್ಡ ದೊಡ್ಡ ಕಾರ್ಖಾನೆಗಳನ್ನು, ಕಟ್ಟಡಗಳನ್ನು, ರಸ್ತೆಗಳನ್ನು ಹೊಂದಿದ ಮಾತ್ರಕ್ಕೆ ಅದನ್ನು ಅಭಿವೃದ್ಧಿ ಹೊಂದಿದ ದೇಶ ಎನ್ನಲು ಸಾಧ್ಯವಿಲ್ಲ. ಜೊತೆಗೆ ಆರೋಗ್ಯಕರ ವಾತಾವರಣವನ್ನು ಹೊಂದಿರುವುದು ಅಷ್ಟೇ ಮುಖ್ಯವಾಗಿರುತ್ತದೆ.
ಆರೋಗ್ಯಕರ ಬದುಕಿಗೆ ಆರೋಗ್ಯಕರ ವಾತಾವರಣವು ಅವಶ್ಯವಾಗಿರುತ್ತದೆ. ಆದರೆ ಮನುಷ್ಯ ಅಭಿವೃದ್ಧಿಯ ನೆಪದಲ್ಲಿ ಪರಿಸರದ ನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ.
ಪರಿಸರ ಸಂರಕ್ಷಣೆ ಎಂದರೇನು?
ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸರ್ಕಾರಗಳು ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮಾಡುವ ಅಭ್ಯಾಸವನ್ನು ಅಥವಾ ನಡೆಸುವ ಕ್ರಿಯೆಯನ್ನು ಪರಿಸರ ಸಂರಕ್ಷಣೆ ಎನ್ನುವರು.
ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಅಸ್ತಿತ್ವದಲ್ಲಿರುವ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಮತ್ತು ಸಾಧ್ಯವಾದರೆ, ಹಾನಿಗೊಳಗಾಗಿರುವ ಪರಿಸರ ಸಂಪನ್ಮೂಲಗಳನ್ನು ಸರಿಪಡಿಸುವುದು ಇದರ ಉದ್ದೇಶಗಳು.
ಪ್ರಸ್ತುತ ದಿನಗಳಲ್ಲಿ ನಮ್ಮ ಗ್ರಹವನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆಗಳಲ್ಲಿ ಪರಿಸರ ಮಾಲಿನ್ಯ ಪ್ರಮುಖವಾದುದು.
ಪರಿಸರ ಮಾಲಿನ್ಯ ಎಂದರೇನು?
ಪರಿಸರ ಅಸಮತೋಲನವಾಗುವ ಮಟ್ಟಿಗೆ ಮಣ್ಣಿನ ಅಥವಾ ವಾತಾವರಣದಲ್ಲಾಗುವ ಭೌತಿಕ, ಜೈವಿಕ ಅಥವಾ ರಾಸಾಯನಿಕ ಬದಲಾವಣೆಯನ್ನು ಸಾಮಾನ್ಯವಾಗಿ ಪರಿಸರ ಮಾಲಿನ್ಯ ಎಂದು ಕರೆಯಲಾಗುತ್ತದೆ.
ಹಲವಾರು ಮಾಲಿನ್ಯ ಕಾರಕಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಮಾಲಿನ್ಯ ಕಾರಕಗಳ ಆಧಾರದ ಮೇಲೆ ಪರಿಸರ ಮಾಲಿನ್ಯವನ್ನು ಹಲವಾರು ವಿಧಗಳಾಗಿ ವಿಂಗಡಿಸಲಾಗುತ್ತದೆ.
ಪರಿಸರ ಮಾಲಿನ್ಯ ವಿಧಗಳು
ವಾಯು ಮಾಲಿನ್ಯ
ಜಲ ಮಾಲಿನ್ಯ
ಮಣ್ಣು/ ಭೂ ಮಾಲಿನ್ಯ
ಶಬ್ದ ಮಾಲಿನ್ಯ
ಉಷ್ಣ ಮಾಲಿನ್ಯ
ವಿಕಿರಣಶೀಲ ಮಾಲಿನ್ಯ
ಪರಿಸರ ಮಾಲಿನ್ಯವು ಜೀವವೈವಿಧ್ಯ, ಸಸ್ಯವರ್ಗ, ಪ್ರಾಣಿ-ಪಕ್ಷಿ ಸಂಕುಲಗಳ ವಿನಾಶಕ್ಕೆ ಕಾರಣವಾಗುವುದಲ್ಲದೆ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.
ಮುಂಬರುವ ಹಲವಾರು ಸಮಸ್ಯೆಗಳಿಂದ ನಾವು ಪಾರಾಗಬೇಕೆಂದರೆ ನಾವು ಪರಿಸರವನ್ನು ಸಂರಕ್ಷಿಸುವುದು ಅತ್ಯಗತ್ಯ.
ಪರಿಸರ ಸಂರಕ್ಷಣೆ: ನಾವು ಪರಿಸರವನ್ನು ಸಂರಕ್ಷಿಸಲು ಪಾಲಿಸಬೇಕಾದ ಕೆಲವು ಸಲಹೆಗಳು ಈ ಕೆಳಗಿನಂತಿವೆ;
ಮರಗಿಡಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕು
ಎಲ್ಲೆಂದರಲ್ಲಿ ಕಸ ಮತ್ತು ತಾಜ್ಯಗಳನ್ನು ಎಸೆಯಬಾರದು
ಕಡಿಮೆ ದೂರದ ಪ್ರಯಾಣಕ್ಕೆ ಕಾಲ್ನಡಿಗೆ ಅಥವಾ ಸೈಕಲ್ ಗಳನ್ನು ಬಳಸುವುದು
ಹೊಗೆ ಉಗುಳುವ ವಾಹನಗಳ ಬದಲಿಗೆ ಹೊಸ ವಾಹನಗಳನ್ನು ಬಳಸುವುದು
ಕಟ್ಟಿಗೆಗಳನ್ನು ಸುಡುವುದು ಅಥವಾ ಸೀಮೆಎಣ್ಣೆಯನ್ನು ಬಳಸುವುದನ್ನು ಕಡಿಮೆ ಮಾಡುವುದು
ಎಲ್ ಇ ಡಿ ಬಲ್ಬ್ ಗಳನ್ನು ಬಳಸುವುದು
ಉದುರಿದ ಮರದ ಎಲೆಗಳನ್ನು, ಅಥವಾ ಇನ್ನಿತರ ಕಸಕಡ್ಡಿಗಳನ್ನು ಸುಡುವುದರ ಬದಲಿಗೆ ಕಾಂಪೋಸ್ಟ್ ಗೊಬ್ಬರಗಳ ತಯಾರಿಕೆಯಲ್ಲಿ ಬಳಸುವುದು
ಪ್ಲಾಸ್ಟಿಕ್ ಅನ್ನು ಸುಡುವುದನ್ನು ನಿಲ್ಲಿಸುವುದು
ವಿಶ್ವ ಪರಿಸರ ದಿನಾಚರಣೆ
ಪರಿಸರದ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಾರೆ. ಭೂಮಿಯ ವಾತಾವರಣ ಮತ್ತು ಪರಿಸರ ಸಂರಕ್ಷಣೆದಂತಹ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಇದರ ಉದ್ದೇಶ.
ಗಿಡಗಳನ್ನು ನೆಡುವುದು, ಪರಿಸರ ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಳ್ಳುವುದು, ಪರೇಡ್ ನಡೆಸುವುದು, ಸಂಗೀತ ಕಚೇರಿಗಳನ್ನು ನಡೆಸುವುದು ಹಾಗೂ ಇನ್ನೀತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸುವುದು ಉಂಟು.
ಇದರಿಂದ ರಾಜಕೀಯ ಗಮನ ಪರಿಸರದ ಕಡೆಗೆ ವಾಲುವುದಲ್ಲದೆ ಪರಿಸರ ಸಂರಕ್ಷಣೆಯ ಕೆಲೆಸ ಕಾರ್ಯಗಳನ್ನು ಹೆಚ್ಚಿಸುವಂತೆ ಮಾಡುತ್ತದೆ.
ಪರಿಸರ ಸಂರಕ್ಷಣೆಯ ಘೋಷಣೆಗಳು
ಅರಣ್ಯ ನಾಶ, ಅದುವೆ ನಮಗೆ ಯಮಪಾಶ
ಕಾಡುಬೆಳಸಿ ನಾಡು ಉಳಿಸಿ
ಕಾಡಿನ ಹಸಿರು, ನಮ್ಮೆಲ್ಲರ ಉಸಿರು
ಪರಿಸರವಿದ್ದರೆ ಸಂಸಾರ…ಇದೇ ಸೃಷ್ಟಿಯ ಸಾರ
ಪ್ರಕೃತಿ ಮಾತೆ, ನಿಜವಾದ ಅನ್ನಧಾತೆ
ಕಾಡನ್ನು ಬೆಳೆಸಿ ನಾಡನ್ನು ಉಳಿಸಿ
ಮನೆಗೊಂದು ಮರ ಊರಿಗೊಂದು ವನ
ಹಸಿರೇ ಉಸಿರು
ನೀರಿಗೆ ನೈದಿಲೆ ಶೃಂಗಾರ, ನಾಡಿಗೆ ಕಾಡೇ ಶೃಂಗಾರ
ಕಾಡಿನ ಸಿರಿ ಬೆಳೆಯುತ್ತಿರೆ ಅದುವೇ ನಾಡಿನ ಸಿರಿ
ಕಾಡು ಬೆಳಸಿ, ಭೂ ತಾಪಮಾನ ಇಳಿಸಿ
ಅಳಿದರೆ ಕಾಡು, ಅಳುವುದು ನಾಡು
ಕಡಿದರೆ ಮರ, ಬರುವುದು ಬರ
ನಿಸರ್ಗದೊಂದಿಗೆ ಕೈ ಜೋಡಿಸಿ
ಗಿಡಮರಗಳಾಗಿರಲಿ ಅಮರ, ಅವುಗಳಿಲ್ಲದಿರೆ ಜೀವನ ನಿಸ್ಸಾರ
ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದೆ ನಾವೆಲ್ಲಿ?
ಪರಿಸರ ಮಾಲಿನ್ಯ ನಿಯಂತ್ರಣ ಸಾಧನಗಳು/ವಿಧಾನಗಳು
ಮಾಲಿನ್ಯ ಕಾರಕಗಳನ್ನು ಹುಟ್ಟು ಹಾಕುವ ಚಟುವಟಿಕೆಗಳನ್ನು ಕಡಿಮೆ ಮಾಡುವುದರಿಂದ ಅಷ್ಟೇ ಅಲ್ಲದೆ ಕೆಲವು ಸಾಧನಗಳು ಬಳಸುವುದರಿಂದ ಅಥವಾ ಕೆಲವು ವಿಧಾನಗಳನ್ನು ಪಾಲಿಸುವುದರಿಂದ ಕಡಿಮೆ ಮಾಡಬಹುದು.
Answer:
ಪರಿಸರ ರಕ್ಷಣೆ ನಮ್ಮ ಹೊಣೆ ಪ್ರಬಂಧ
Explanation:
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳಿರುತ್ತೇವೆ. ಮಾತ್ರವಲ್ಲದೆ ಅದರ ಮೇಲೆ ಪ್ರೀತಿ, ಕಾಳಜಿಯು ಮುಖ್ಯವಾಗಿರುತ್ತದೆ. ಅದಕ್ಕನುಗುಣವಾಗಿ ವಿಶ್ವ ಪರಿಸರ ದಿನವೆಂದು ಜೂನ್ 5ರಂದು ಆಚರಿಸುತ್ತೇವೆ. ಈ ಮಾತು ಕೇವಲ ಆ ದಿನಕ್ಕನುಗುಣವಾಗಿರದೆ ಪ್ರತಿ ದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ನಮಗೆ ತಿಳಿದಿವೆ. ಈ ಜಗತ್ತಿನ ಅತಿ ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಅತಿಹೆಚ್ಚು ಸ್ಥಾನ ನಮ್ಮ ದೇಶದಲ್ಲಿವೆಯೆಂದು ಏರ್ ಕ್ವಾಲಿಟಿ ರಿಪೋರ್ಟ್ ಹೇಳುತ್ತಿದೆ. ಪರಿಸ್ಥಿತಿ ಕೆಲವು ಕಡೆಗಳಲ್ಲಿ ಕೈ ಮೀರಿ ನಿಂತಿದೆ ಎನ್ನುವ ಸಂದರ್ಭದಲ್ಲಿ ಇಡೀ ವಿಶ್ವಕ್ಕೇ ಸವಾಲಾಗಿ ಕೋವಿಡ್ ಎಂಬ ವೈರಸ್ ನಿಂತಿದೆ. ಇದರಿಂದ ಎಷ್ಟೋ ಅಭಿವೃದ್ಧಿ ಕಾರ್ಯಗಳು ನಿಂತರೆ ಅತ್ತ ಪರಿಸರ ಕಳೆದು ಹೋಗಿದ್ದ ತನ್ನ ಜೀವಕಳೆ ಮರಳಿ ಪಡೆಯಿತು. ದೇವರ ಆಟ ಬಲ್ಲವರಾರು ಎಂಬಂತೆ ಈ ಸಮಯದ ಸದ್ವಿನಿಯೋಗವಾದಂತಾಯಿತು.
ಲೊಕ್ಡೌನ್ ಸಂದರ್ಭ ಅದೆಷ್ಟೋ ಧೂಳು ಮಿಶ್ರಿತ ಪ್ರದೇಶ ಕಡಿಮೆಯಾಯಿತು, ಕಲುಷಿತಗೊಂಡಿದ್ದ ನದಿಗಳು ಸ್ವಚ್ಛತೆಯಿಂದ ಕೂಡಿತು, ಅದಷ್ಟೇ ಅಲ್ಲದೆ ಪ್ರಾಣಿ- ಪಕ್ಷಿ ಸಂಕುಲಗಳು ನಿರ್ಭೀತಿಯಿಂದ ವಿಹರಿಸಿದವು. ಈ ಮಾತು ಏಕೆ ಬಂತೆಂದರೆ ಮನುಷ್ಯನ ದುರ್ಭುದ್ಧಿ ಹಾಗೂ ದುರಾಲೋಚನೆಯಿಂದ ಕಾಡು ಇದ್ದ ಜಾಗದಲ್ಲಿ ನಾಡು ಎದ್ದು ನಿಂತಿದೆ .ಇವೆಲ್ಲವೂ ಮುಖ್ಯ ಎಂದೆನಿಸಿದರೆ ಪರಿಸರ ರಕ್ಷಣೆ ಮಾತು ಏಕೆ ಬಹುಮುಖ್ಯವೆನಿಸಿಲ್ಲ? ಇವೆಲ್ಲ ಮನುಷ್ಯನ ಆಸೆ, ಆಕಾಂಕ್ಷೆಗಳನ್ನೂ ಮೀರಿ ದುರಾಸೆಯ ಪ್ರತಿಫಲವಾಗಿ ಇಂದು ಹಲವಾರು ಕಡೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿ ಗೋಚರಿಸಿದೆ. ಹಾಗೆಯೇ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳ ಜೊತೆಗೆ ವೈಪರೀತ್ಯದ ಪ್ರಭಾವ ತುಸು ಹೆಚ್ಚಾಗಿಯೇ ಇದೆ. ಇದೇ ಕಾರಣಕ್ಕಾದರೂ ಪರಿಸರ ರಕ್ಷಿಸಿ ಉಳಿಸಿ ಬೆಳೆಸಿಕೊಂಡರೆ ಪ್ರಸ್ತುತ ಪರಿಸ್ಥಿತಿ ತುಸು ಬದಲಾವಣೆಯ ಬಗ್ಗೆ ಯೋಚಿಸಬಹುದು. ಇದಲ್ಲದೇ ಕಟ್ಟು ನಿಟ್ಟಿನ ಕ್ರಮಗಳಿದ್ದರೂ ವಾಮ ಮಾರ್ಗದ ಮೂಲಕ ತಮ್ಮ ಕಾರ್ಯ ಸಫಲಗೊಳ್ಳುತ್ತದೆ.
ಇದಕ್ಕೆ ಮುನ್ಸೂಚನೆಯಂತೆ ಅತಿ ದಟ್ಟ ಅರಣ್ಯ ಎಂಬ ಖ್ಯಾತಿ ಗಳಿಸಿರುವ ಅಮೆಜಾನ್ ನ ಪಾಶ್ವ ಭಾಗ ಬೆಂಕಿಗಾಹುತಿ, ಆಸ್ಟ್ರೇಲಿಯಾದ ಬಹುತೇಕ ಹುಲ್ಲುಗಾವಲು ಪ್ರದೇಶ ಹಾಗೂ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿದ ಬೆಂಕಿ ನಿಯಂತ್ರಣ ಸಾಧಿಸಲು ಹಲವಾರು ದಿನಗಳೇ ಬೇಕಾಯಿತು. ಹೀಗೆ ಹತ್ತು ಹಲವಾರು ದೇಶಗಳಲ್ಲಿ ವಿವಿಧ ಕಾರಣಗಳಿಂದ ಆದ ಅನಾಹುತ ನಮ್ಮ ಸಮಾಜದಲ್ಲಿ ಚರ್ಚೆ ನಡೆದದ್ದೂಇದೆ. ಮುಖ್ಯವಾಗಿ ಈಗಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿಯಾಗಿವೆ. ಮರಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ನಿರಾಯಾಸವಾಗಿ ಬದಲಿಸಬಹುದು ಈ ತಂತ್ರಜ್ಞಾನದ ಸಹಾಯದಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುರುಪಯೋಗವಿದೆ ಎಷ್ಟು ಪರಿಣಾಮಕಾರಿಯಾಗಿ ಪ್ರಭಾವ ಬೀರುವುದೋ ಅಷ್ಟೇ ಒಳಿತು ಕೆಡುಕಿನ ಸಂಭವವಿರುತ್ತದೆ. ಈಗಿನ ಬಹುತೇಕ ಕೆಲಸ ಕಾರ್ಯಗಳು ಕೇವಲ ಲಾಭ ನಷ್ಟದ ಪ್ರಮಾಣವನ್ನಾಧರಿಸಿದೆ. ಕಾರಣ ಲಾಭ ಮನುಷ್ಯನ ಗೌರವ ಪ್ರತಿಷ್ಠೆ ಮಾತಾದರೆ ನಷ್ಟ ಮಾನ ಮರ್ಯಾದೆ ಪ್ರಶ್ನೆಯಾಗಿ ಬದಲಾವಣೆಯಾಗಿದೆ. ಇದೇ ರೀತಿ ಪರಿಸರ ದಿನದ ಮಹತ್ವ ಪೂರ್ಣ ಸಾಕಾರಗೊಳಿಸುವ ಪ್ರಯತ್ನ ನಮ್ಮ ನಿಮ್ಮೆಲ್ಲರದಾಗಲಿ. ವೃಕ್ಷೊà ರಕ್ಷತಿ ರಕ್ಷಿತಃ