India Languages, asked by surekhaasangi7, 12 hours ago

ಅರಣ್ಯ ಒಂದು ಸಂಪನ್ಮೂಲ. ಇದರ ಮೇಲೆ ಪ್ರಬಂಧ ಬರೆಯಿರಿ
plz help me plz plz fast​

Answers

Answered by Anonymous
18

Answer:

ಗಿಡಮರಗಳಿಂದ ಕೂಡಿ ಒಂದು ಯಾಜಮಾನ್ಯಕ್ಕೆ ಅಥವಾ ಆಡಳಿತಕ್ಕೆ ಸೇರಿರುವ ಅಥವಾ ವನಖಂಡಗಳಿಂದ ಕೂಡಿರುವ ಪ್ರದೇಶ ಅರಣ್ಯ. ಅರಣ್ಯಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಬೆಳೆಸಿ ಅವುಗಳಿಂದ ಪರಮಾವಧಿ ಉಪಯೋಗ ಹೊಂದುವ ವಿಧಾನ ಅರಣ್ಯಶಾಸ್ತ್ರ ಸಂಯುಕ್ತರಾಷ್ಟ್ರಗಳ ಆಹಾರ ಮತ್ತು ಕೃಷಿ ವಿಭಾಗ ನೀಡಿರುವ ವ್ಯಾಖ್ಯೆಯ ಪ್ರಕಾರ ಸಸ್ಯಸಮುದಾಯದಿಂದ ವ್ಯಾಪ್ತವಾಗಿರುವ, ಎಲ್ಲ ಗಾತ್ರದ ಗಿಡಮರಗಳು ಪ್ರಧಾನವಾಗಿರುವ, ಕಡಿಯಲಿ ಬಿಡಲಿ ಮರಮುಟ್ಟು, ಸೌದೆ ಒದಗಿಸಲು ಸಮರ್ಥವಾಗಿರುವ ಅಥವಾ ಸ್ಥಳೀಯ ಹವೆಯ ಮೇಲೆ ಅಥವಾ ಜಲಸಂಪತ್ತಿನ ಮೇಲೆ ಪ್ರಭಾವ ಬೀರಲು ಶಕ್ತವಾಗಿರುವ, ಎಲ್ಲ ನೆಲೆಗಳಿಗೂ ಅರಣ್ಯ ಎಂಬ ಹೆಸರಿದೆ. ಕಾಡು, ಅಡವಿ ಪರ್ಯಾಯ ಪದಗಳು. ಕಾಡನ್ನು ಈಚೆಗೆ ಕಡಿದುಳಿಸಿರುವ ಆದರೆ ಬೇಗನೆ ಹೊಸಕಾಡನ್ನು ಬೆಳೆಸಲು ಉದ್ದೇಶಿಸಿರುವ ನೆಲವೂ ಅರಣ್ಯವೇ.

ಭಾರತದಲ್ಲಿ ಅರಣ್ಯಾವೃತ ಪ್ರದೇಶ ಒಟ್ಟು ನೆಲದ 20.55% ಇದೆ. ಇದು ಪ್ರಪಂಚದ ಮಿತಿಗಿಂತ ಕಡಿಮೆ. ಈ ಪ್ರಮಾಣವನ್ನು 33.3%ಗೆ ಏರಿಸಬೇಕೆಂದು 1952 ರಲ್ಲಿ ರಾಷ್ಟ್ರೀಯ ಅರಣ್ಯಧೋರಣೆ ಠರಾವು ಸರ್ಕಾರಕ್ಕೆ ಸೂಚಿಸಿದೆ. ಭಾರತದ ಅರಣ್ಯಗಳನ್ನು ಐದು ಭಾಗಗಳಾಗಿ ವರ್ಗೀಕರಿಸಲಾಗಿದೆ-1 ನಿತ್ಯಹರಿದ್ವರ್ಣ: 2 ತೇವ ಪರ್ಣಪಾತಿ ಅಥವಾ ಕಾಲಕಾಲಕ್ಕೆ ಎಲೆ ಉದುರುವ ಅರಣ್ಯ: 3 ಶುಷ್ಕ ಪರ್ಣಪಾತಿ 4. ಬೆಟ್ಟ ಪ್ರದೇಶದ ಉಪುಷ್ಣವಲಯದ ಅರಣ್ಯ-ಮಾಂಟೇನ್ ಸಬ್ ಟ್ರಾಪಿಕಲ್ 5. ನದೀಮುಖದ ಅರಣ್ಯ.

ಪ್ರಯೋಜನಗಳು:

★ ಸೌದೆ, ದಿಮ್ಮಿ, ಮರಮುಟ್ಟುಗಳ ಪೂರೈಕೆ ಮತ್ತು ಅರಣ್ಯಜನ್ಯವಸ್ತುಗಳು ಮನುಷ್ಯ ಜೀವನಕ್ಕೆ ಅತ್ಯಾವಶ್ಯಕ. ★ನಿಸರ್ಗದ ಸಮತೋಲವನ್ನು ಕಾಪಾಡುವ ಮನುಷ್ಯನಿಗೆ ವಿನೋದ ಮತ್ತು ಆಹಾರ ಒದಗಿಸುವ ವನ್ಯಮೃಗಗಳ ನಿವಾಸ ಅರಣ್ಯ.

★ ನೀರಿನ ಸವೆತದಿಂದ, ಗಾಳಿಯ ಹೊಡೆತದಿಂದ ಮಣ್ಣಿನ ಫಲವತ್ತಾದ ಹೊರಪದರ ಸವೆದು ಹೋಗದಂತೆ ರಕ್ಷಿಸುವ ಕವಚ ಅರಣ್ಯ. ಅಲ್ಲದೆ ಮಣ್ಣಿನ ಫಲವಂತಿಕೆಯನ್ನು ಅರಣ್ಯ ವರ್ಧಿಸುತ್ತದೆ.

★ ಮಳೆ ನೀರಿನ ಹರಿವನ್ನು ತಡೆಯುವುದರ ಮೂಲಕ ತೋಡುಹೊಳೆಗಳಲ್ಲಿ ಒಂದೇ ಸಲ ಪ್ರವಾಹವೇರಿ ಊರು, ಜನ ನಾಶವಾಗದಂತೆ ಅರಣ್ಯ ರಕ್ಷಣೆ ನೀಡುತ್ತದೆ.

ಅದರಿಂದ ನಾವು ಅರಣ್ಯವನ್ನು ರಕ್ಷಿಸಬೇಕು.

\huge{\underline{\mathtt{\red{ಧ}\pink{}\green{ನ್ಯ}\blue{ವಾ}\purple{ದ}\orange{ಗ}\red{}\pink{ಳು}}}}

Answered by nsvaggar
3

Explanation:

ಮರಗಳಿಲ್ಲದೆ ಒಣಗಿ ನಿಂತ ಅರಣ್ಯ ಭೂಮಿಯಲ್ಲಿ ಮತ್ತೆ ಹಸಿರು ಉಕ್ಕಿಸುವುದು ಮತ್ತು ಬಂಜರು ಪ್ರದೇಶದಲ್ಲೂ ಸಸಿಗಳನ್ನು ನೆಟ್ಟು ಬೆಳೆಸುವುದು- ಈ ಎರಡೂ ಮುಖ್ಯ ಕಾರ್ಯಗಳನ್ನು ಅರಣ್ಯ ಇಲಾಖೆ ಕಳೆದ 50 ವರ್ಷಗಳಿಂದಲೂ ಮಾಡುತ್ತಾ ಬಂದಿದೆ. ಆದರೆ, ಗುರಿ ಮುಟ್ಟಲು ಸಾಧ್ಯವಾಗಿಲ್ಲ. ವಿವೇಚನೆ ಇಲ್ಲದೆ ಆಯ್ಕೆ ಮಾಡಲಾದ ಸಸ್ಯ ಪ್ರಭೇದಗಳು, ಚಿಕ್ಕ ಚೀಲಗಳಲ್ಲಿ ಬೆಳೆಸಲಾದ ಅಶಕ್ತ ಸಸಿಗಳು, ನಿಯಂತ್ರಣಕ್ಕೆ ಬಾರದ ಬೆಂಕಿ ಅನಾಹುತಗಳು ಹಾಗೂ ಕಾಡಿನಲ್ಲಿ ಹೆಚ್ಚಿದ ಮಾನವ ಮತ್ತು ದನಕರುಗಳ ಒತ್ತಡ- ಇವೇ, ಅರಣ್ಯ ಇಲಾಖೆ ಪ್ರಯತ್ನಗಳು ವಿಫಲವಾಗಲು ಕಾರಣ.

ಅರಣ್ಯ ಸಂರಕ್ಷಣೆ ವಿಧಾನದಲ್ಲಿ ಈಗ ಸಾಕಷ್ಟು ಬದಲಾವಣೆ ಆಗಿದೆ. ತಂತ್ರಜ್ಞಾನದ ಬಳಕೆಯೂ ಹೆಚ್ಚಿದೆ. ಅರಣ್ಯದ ಗಡಿ ಸುತ್ತ ಗುಂಡಿ ತೋಡುವ ಹಾಗೂ ಬೇಲಿ ಹಾಕುವ ಕೆಲಸಕ್ಕೂ ಯಂತ್ರಗಳ ನೆರವು ಸಿಗುತ್ತಿದೆ. ದೊಡ್ಡ ಗಾತ್ರದ ಚೀಲಗಳಲ್ಲಿ ಚೆನ್ನಾಗಿ ಬೆಳೆದ ಸಸಿಗಳು ನೆಡಲು ಲಭ್ಯವಾಗುತ್ತಿವೆ. ನರ್ಸರಿಗಳಲ್ಲೇ ಸಸಿಗಳನ್ನು ಬಹುಕಾಲ ನಿರ್ವಹಣೆ ಮಾಡುವ ಹೊಣೆಯನ್ನು ಸಹ ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ. ಕಳೆದ ಶತಮಾನದ 90ರ ದಶಕಕ್ಕೆ ಹೋಲಿಸಿದರೆ ಸಸಿಗಳನ್ನು ಮರಗಳನ್ನಾಗಿ ಬೆಳೆಸುವ ಯಶಸ್ಸಿನ ದರ ಸಹ ಈಗ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯದ ಬೆಳವಣಿಗೆ ಮತ್ತು ನಿರ್ವಹಣೆಗೆ ಹೊಸ ತಂತ್ರಜ್ಞಾನ ಬಳಸಲು ಸರ್ಕಾರ ತನ್ನ ಬೆಂಬಲವನ್ನು ಮುಂದುವರಿಸುವುದು ಅಗತ್ಯವಾಗಿದೆ.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವ ಗಣಿ ಮಾಲೀಕರಿಂದ ಭೂಬಾಡಿಗೆ ಮತ್ತು ಅರಣ್ಯ ಅಭಿವೃದ್ಧಿ ಶುಲ್ಕ ವಸೂಲಿಗೆ ಸರ್ಕಾರ ನಿಯಮಾವಳಿ ರೂಪಿಸಿದೆ. ಆದರೆ, ಹೈಕೋರ್ಟ್‌ನ ಮಧ್ಯಂತರ ಆದೇಶದ ಪ್ರಯೋಜನ ಪಡೆದಿರುವ ಗಣಿ ಉದ್ಯಮಿಗಳು ಭೂಬಾಡಿಗೆ ಮತ್ತು ಅಭಿವೃದ್ಧಿ ಶುಲ್ಕದಿಂದ ಭಾಗಶಃ ಇಲ್ಲವೇ ಪೂರ್ಣಪ್ರಮಾಣದ ರಿಯಾಯಿತಿ ಪಡೆದಿದ್ದಾರೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ನಷ್ಟ ಸಂಭವಿಸುತ್ತಿದೆ. ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ತೆರವುಗೊಳಿಸಿ, ಸೋರಿಕೆ ಆಗುತ್ತಿರುವ ಆದಾಯವನ್ನು ಶೇಖರಿಸಲು ಸರ್ಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ.

ಅರಣ್ಯ ಭೂಮಿಯನ್ನು ಜನಪ್ರತಿನಿಧಿಗಳ ನೆರವಿನಿಂದ ಒತ್ತುವರಿ ಮಾಡುವ ಕಾರ್ಯ ಎಲ್ಲೆಡೆ ಎಗ್ಗಿಲ್ಲದೆ ನಡೆದಿದೆ. ಇದರಿಂದ ಪರಿಸರ ಮತ್ತು ಜೀವವೈವಿಧ್ಯಕ್ಕೆ ದೊಡ್ಡ ಏಟು ಬೀಳುತ್ತಿದೆ. ಮರಗಳನ್ನು ನಿರ್ದಯವಾಗಿ ಕಡಿಯುವುದು ಮತ್ತು ಅವುಗಳ ಕಳ್ಳ ಸಾಗಾಟವನ್ನು ತಡೆಯುವುದು ಸವಾಲಾಗಿದೆ. ಒತ್ತುವರಿಯನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾದರೆ ಅರಣ್ಯ ಹಕ್ಕು ಕಾಯ್ದೆ `ಗುರಾಣಿ' ಹಿಡಿದು ಅಂತಹ ಪ್ರಯತ್ನಗಳಿಗೆ ತಡೆ ಒಡ್ಡಲಾಗುತ್ತದೆ. ಜನಪ್ರತಿನಿಧಿಗಳೇ ಹೋರಾಟದ ಮುಂಚೂಣಿಯಲ್ಲಿ ನಿಂತು ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಸಹಾಯಕ ಸ್ಥಿತಿಗೆ ನೂಕುತ್ತಾರೆ. ರಾಜಕಾರಣಿಗಳ ಒತ್ತಡ ಹೆಚ್ಚಾಗಿರುವ ಕಾರಣ ಅಧಿಕಾರಿಗಳು ಸಹ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ರಾಜಕೀಯ ಇಚ್ಛಾಶಕ್ತಿ ಇಲ್ಲದಿದ್ದರೆ ಅರಣ್ಯ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸಲು ಸಾಧ್ಯವೇ ಇಲ್ಲ. ತೆರವಿಗೆ ಅಂತಹ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ.

Similar questions