plz write this letter writing
Answers
ಹರ್ಷಿತ
10ನೇ ತರಗತಿ
ಸರ್ಕಾರಿ ಪ್ರೌಢಶಾಲೆ,
ಬನಶಂಕರಿ
ದಿನಾಂಕ : 07.07.2019
ತೀರ್ಥರೂಪರಿಗೆ ನಿಮ್ಮ ಮಗಳಾದ ಹರ್ಷಿತಳು ಮಾಡುವ ನಮಸ್ಕಾರಗಳು. ಇಲ್ಲಿ ನಾನು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ.
ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಈಗ ರೂಪಣಾತ್ಮಕ ಪರೀಕ್ಷೆಗಳು ಪ್ರಾರಂಭವಾಗಲಿದೆ. ಈ ಬಾರಿ ನಾನು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯಬೇಕೆಂದುಕೊಂಡಿರುವುದರಿಂದ ಉತ್ತಮವಾಗಿ ಅಭ್ಯಾಸವನ್ನು ಮಾಡುತ್ತಿದ್ದೇನೆ. ನನ್ನ ಸ್ನೇಹಿತರು ಸಹ ನನಗೆ ಸಹಕಾರ ನೀಡುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಗೊತ್ತಾಗದ ವಿಷಯಗಳನ್ನು ಕೇಳಿ ತಿಳಿಯುತ್ತಿದ್ದೇನೆ. ನನಗೆ ನಿಮ್ಮ ಆಶೀರ್ವಾದವು ಇರಲಿ.
ಇನ್ನೇನು ವಿಷಯವಿಲ್ಲ. ನನ್ನ ತಂದೆ ಹಾಗೂ ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿಮ್ಮ ಪತ್ರಕ್ಕಾಗಿ ಕಾದಿರುವೆ.
ಇಂತಿ ತಮ್ಮ ಪ್ರೀತಿಯ ಮಗಳು,
ಹರ್ಷಿತ
ಹೊರ ವಿಳಾಸ
ಗೆ,
ರೋಸಲೀನ್,
ಮನೆ ನಂ. 12/21, 4ನೇ ಅಡ್ಡರಸ್ತೆ,
ಕುವೆಂಪು ನಗರ,
ಮಂಗಳೂರು
ನಿನಗೆ ಈ ಇತರ ಅನುಕೂಲವಾಗುವುದು ಅಂತ ಭಾವಿಸಿದ್ದೇನೆ