ಗಾದೆ
"ಶಂ. ಯುಕ್ತಿಮೇಲು »Shakti ginta Yukti melu gadhe meaning
Answers
ಇದು ಒಂದು ಗಾದೆ ಮಾತು ಆಗಿದ್ದು, ಒಬ್ಬ ವ್ಯ್ಯಕ್ತಿಗೆ ಶಕ್ತಿ ಎಷ್ಟು ಇದ್ದರೇನು? ಅವನಿಗೆ ಅಪಾಯ ಬಂದಾಗ ಅವನು ಏನು ಮಾಡೋಕೆ ಆಗೋಲ್ಲ..ಅದೇ ರೀತಿ ಒಬ್ಬ ವ್ಯ್ಯಕ್ತಿ ಒಳ್ಳೆ ಬುದ್ಧಿ ಮತ್ತು ಒಳ್ಳೆ ವಿಚಾರವಂತ ಆಗಿದ್ದರೆ ಅವನು ಎಂತಹ ಕಷ್ಟ ಬಂದರು ಅದರಿಂದ ಪಾರಾಗುವ ಯುಕ್ತಿ ಮತ್ತು ವಿಚಾರ ಇದ್ದರೆ ಸಾಕು ಅವನು ಎಂತಹ ಅಪಾಯ ಬಂದರು ಪಾರಾಗಬಲ್ಲ.
ಹಾಗೆಯೇ, ಬೆಟ್ಟದಂತ ದೇಹವಿದ್ದರೆ ಏನು?
ಪಾದರಸ ದಂತಹ ಬುದ್ಧಿ ಇರಬೇಕು.
✌️✌️✌️✌️✌️✌️✌️
pls mark it as brainliest
Answer:
ಶಕ್ತಿಗಿಂತ ಯುಕ್ತಿ ಮೇಲು.
ಗಾದೆಗಳು ಜನಪದರ ಜೀವನದ ಅನುಭವದ ನುಡಿಮುತ್ತುಗಳು ಇವುಗಳಿಂದ ಜೀವನದ ಮೌಲ್ಯ ಹೆಚ್ಚುತ್ತದೆ.ಆದ್ದರಿಂದಲೇ ‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ‘ಗಾದೆಗಳನ್ನು ವೇದಗಳಿಗೆ ಸಮಾನ’ ಎಂದುಹೇಳುವರು. ಅಂತಹ ಹಲವು ಪ್ರಸಿದ್ಧ ಗಾದೆಗಳಲ್ಲಿ ಇದು ಒಂದಾಗಿದೆ.
ಸಂಸ್ಕೃತದ ಉಕ್ತಿಯೊಂದು ‘ನಾಶಕ್ಯಂ ಬುದ್ದಿವಂತ: ಪರುಷಸ್ಯ’ ಎಂದು ಹೇಳುತ್ತದೆ ಅಂದರೆ ಬುದ್ದಿವಂತ ಪುರುಷನಿಗೆ ಅಸಾಧ್ಯವದುದು ಯಾವುದು ಇಲ್ಲ .ಬುದ್ಧಿ ಮತ್ತು ಬಲಗಳ ನಡುವೆ ಸಂಘರ್ಷ ಏರ್ಪಟ್ಟಗ ಬುದ್ದಿಗೆ ಗೆಲುವು ನಿಶ್ಚಿತ. ಆನೆ ಎಷ್ಟೇ ಬಲಿಷ್ಟವಾದರೂ ಬುದ್ಧಿವಂತ ಗುಬ್ಬಚ್ಚಿಗಳು ಇರುವೆಯ ಸಹಾಯ ಪಡೆದು ಆನೆಯನ್ನು ಕೊಂದ ಕಥೆ ಪಂಚತಂತ್ರದಲ್ಲಿದೆ. ಆನೆ ಎಷ್ಟೇ ಬಲಿಷ್ಠವಗಿದ್ದರೂ ಬುದ್ಧಿಶಕ್ತಿಯಿಲ್ಲದ್ದರಿಂದ ನಾಶ ಹೊಂದಬೇಕಾಯಿತು.ಆದ್ದರಿಂದಲೇ ಶಕ್ತಿಗಿಂಗಿಂತ ಯುಕ್ತಿ ಮೇಲು ಎಂಬುದನ್ನು ಈ ಗಾದೆ ಮಾತು ಸೂಚಿಸುತ್ತದೆ.