Show the essay on doordarshan in kannada
Answers
ದೂರದರ್ಶನ
ಇತ್ತೀಚೆಗೆ ದೂರದರ್ಶನ, ಅಂದರೆ ‘ಟಿ.ವಿ.’ ಎಂಬುದು ಎಲ್ಲರಿಗೂ ಜೀವಕ್ಕಿಂತ ಮಿಗಿಲಾಗಿ ಪರಿಣಮಿಸಿದೆ. ಈ ಶಬ್ಧವು ಎಲ್ಲರನ್ನೂ ಮೋಡಿ ಮಾಡಿದೆ, ನಮ್ಮಂತಹ ಮಕ್ಕಳು ಬಾಯಾರಿಕೆ, ಹಸಿವು, ನಿದ್ರೆ, ಅಭ್ಯಾಸ, ಆಟ ಹಾಗೂ ಇನ್ನಿತರ ಕೆಲಸ ಬದಿಗಿಟ್ಟು ದೂರದರ್ಶನ ಕಾರ್ಯಕ್ರಮ ನೋಡುವುದರಲ್ಲಿ ಮಗ್ನರಾಗಿರುವುದು ಕಾಣಿಸುತ್ತಿದೆ. ಆ ಮಕ್ಕಳು ಜೀವನದಲ್ಲಿನ ಅಮೂಲ್ಯ ಹಾಗೂ ಪುನಃ ಎಂದೂ ಬಾರದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ.
ಮೊದಲ ದೂರದರ್ಶನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜುಲೈ 1, 1941 ರಂದು ಬಿತ್ತರಿಸಲ್ಪಟ್ಟಿತು. ವಾಚ್ ತಯಾರಕ ಬುಲೋವಾ ಬ್ರೂಕ್‌ಲಿನ್ ಡಾಜರ್ಸ್ ಮತ್ತು ಫಿಲಾಡೆಲ್ಫಿಯಾ ಫಿಲೀಸ್‌ಗಳ ನಡುವೆ ಒಂದು ಬೇಸ್‌ಬಾಲ್ ಆಟಕ್ಕೂ ಮುಂಚೆ ನ್ಯೂಯಾರ್ಕ್ ಸ್ಟೇಷನ್ ಡಬ್ಲುಎನ್‌ಬಿಟಿಯಲ್ಲಿ ಬದಲಾವಣೆಗಾಗಿ $9 ಗಳನ್ನು ನೀಡಿದ್ದರು. 20-ಸೆಕೆಂಡ್‌ನ ಜಾಹೀರಾತು ಯುನೈಟೆಡ್ ಸ್ಟೇಟ್ಸ್‌ನ ನಕ್ಷೆಯ ಮೇಲೆ ಇರಿಸಲ್ಪಟ್ಟ ಒಂದು ಗಡಿಯಾರದ ಚಿತ್ರವನ್ನು ಪ್ರದರ್ಶಿಸಿತು. ಜೊತೆಗೆ ಇದು "ಅಮೇರಿಕಾ ರನ್ಸ್ ಆನ್ ಬುಲೋವಾ ಟೈಮ್" ಎಂಬ ಘೋಷಣೆಯನ್ನೂ ಒಳಗೊಂಡಿತ್ತು.
ನಮ್ಮಲ್ಲಿ ಸುಸಂಸ್ಕಾರ ನಿರ್ಮಾಣವಾಗುವಂತಹ ಕಾರ್ಯಕ್ರಮ, ಉದಾ. ಸಂತರ, ಕ್ರಾಂತಿಕಾರರ ಮತ್ತು ಸಮಾಜಪ್ರಭೋದನೆ ಮಾಡುವಂತಹ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಅಗತ್ಯವಾಗಿ ನೋಡಬೇಕು, ಆದರೆ ದುರ್ದೈವದಿಂದ ಇಂತಹ ಕಾರ್ಯಕ್ರಮಗಳನ್ನು ಬಹಳ ಕಡಿಮೆ ಮಕ್ಕಳು ನೋಡುತ್ತಾರೆ. ಮಕ್ಕಳು ಅತ್ತೆ-ಸೊಸೆಯ ಕಲಹದ 'ಕೌಟುಂಬಿಕ' ಮಾಲಿಕೆಯನ್ನು ನೋಡುತ್ತಾರೆ, ಅದರಲ್ಲಿನ ಪಾತ್ರದಾರಿಗಳು ದ್ವೇಷದಿಂದ ಜಗಳ ಮಾಡುತ್ತಾರೆ. ಈ ಮಾಲಿಕೆಯಲ್ಲಿ ಅಳುವಂತಹ ದೃಶ್ಯಗಳಿಗ್ಕೆ ಪರ್ಯಾಯವಿರುವುದಿಲ್ಲ. ಮಕ್ಕಳು ಯಾವಾಗಲೂ ಚಲನಚಿತ್ರಗಳ ಸಂಗೀತವನ್ನು ಗೊಣಗುತ್ತಿರುತ್ತಾರೆ. ಇತ್ತೀಚೆಗೆ ಎಲ್ಲರೂ ಹೊಸ ಚಲನಚಿತ್ರಗಳ ವಿಜ್ಞಾಪನೆ, ಕಲಾಕಾರರ ಭೇಟಿ (ಸಂಪರ್ಕ) ಚಲಚನಚಿತ್ರ, ಹಾಡು ಹಾಗೂ ಹಾವಭಾವ ಮಾಡುವಂತಹ ನೃತ್ಯಗಳನ್ನು ನೋಡುತ್ತಾರೆ. ಆದುದರಿಂದ ನಾವು ಸಹ ಹಾಗೆ ಮಾಡಬೇಕೆಂಬ ಭಾವನೆ ಮಕ್ಕಳಲ್ಲಿ ನಿರ್ಮಾಣವಾಗುವುದು.
ಇತ್ತೀಚೆಗೆ ದೂರಚಿತ್ರವಾಣಿಯಲ್ಲಿ 3 ರಿಂದ 15 ವರ್ಷಗಳ ಅಂತರದಲ್ಲಿ ಚಿಕ್ಕ ಮಕ್ಕಳನ್ನು ಸಹ ನೃತ್ಯ, ಹಾಡು, ಅಭಿನಯ, ವಿನೋದ ಇತ್ಯಾದಿ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ಸಮಾವೇಶ ಮಾಡಿಕೊಳ್ಳಲಾಗುತ್ತದೆ. ಅವರ ಮುಂದೆ ನೈತಿಕತೆಯಿಲ್ಲದ ಚಲನಚಿತ್ರ ನಟ-ನಟಿಯರ ಆದರ್ಶವನ್ನಿಡಲಾಗುತ್ತದೆ. ಈ ಕಾರ್ಯಕ್ರಮಗಳಿಂದ ಮಕ್ಕಳ ಹಾಗೂ ಅವರ ಪಾಲಕರ ಭಾವನೆಗಳೊಂದಿಗೆ ಆಟವಾಡಲಾಗುತ್ತದೆ. ಇದರಿಂದ ಅವರಲ್ಲಿ ಸ್ಪರ್ಧಾತ್ಮಕ ವಿಚಾರಗಳ ವೃದ್ಧಿಯಾಗತ್ತದೆ. ಇಂತಹ ಎಲ್ಲ 'ಮನೋರಂಜನೆಯಲ್ಲಿ' ಮಕ್ಕಳೊಂದಿಗೆ ದೊಡ್ಡವರು ಸಹ ತಮ್ಮನ್ನು ಎಷ್ಟು ಹೊಂದಿಸಿಕೊಳ್ಳುತ್ತಾರೆಂದರೆ, ‘ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ನಮ್ಮದೇನಾದರೂ ಕರ್ತವ್ಯವಿದೆ', ಎಂಬುದನ್ನು ಮರೆತು ಬಿಡುತ್ತಾರೆ.
ನಿರ್ಬಂಧಗಳು :-
2 ಜನವರಿ 1971 ರಿಂದ ಅನ್ವಯವಾಗುವಂತೆ ಸಿಗರೇಟ್‌ಗಳ ಪ್ರಚಾರವನ್ನು ಅಮೇರಿಕಾದ ದೂರದರ್ಶನದಲ್ಲಿ ನಿಷೇಧಿಸಲಾಯಿತು. ಮಧ್ಯಸಾರದ ಮೇಲಿನ ಪ್ರಚಾರಕ್ಕೆ ಅನುಮತಿ ನೀಡಲಾಯಿತಾದರೂ ದೂರದರ್ಶದಲ್ಲಿನ ಪ್ರಚಾರದಲ್ಲಿ ಮಧ್ಯಸಾರವನ್ನು ಸೇವಿಸುವುದನ್ನು ತೋರಿಸುವಂತಿ ರಲಿಲ್ಲ. 1990 ರ ದಶಕದ ನಂತರದ ದೂರದರ್ಶನದಲ್ಲಿ ನೀಡುವ ಪ್ರಚಾರಗಳು ತನ್ನ ದಿಕ್ಕನ್ನು ಬದಲಿಸಿಕೊಂಡು ಮನೆ ಉಪಯೋಗದ ಸಾಮಗ್ರಿಗಳನ್ನು ಮತ್ತು ಆಹಾರ ಸಾಮಗ್ರಿಗಳ ಬಗ್ಗೆ ಹೆಚ್ಚು ಒಲವನ್ನು ತೋರಿದವಾದರೂ ಹೊಸತನವನ್ನು ಪಡೆಯದ ಇವು ಹೆಚ್ಚುಕಾಲ ನಡೆಯದೇ ಇಪ್ಪತ್ತನೇ ಶತಮಾನದ ಮಧ್ಯಂತರದಿಂದ ಶತಮಾನದ ಅಂತ್ಯದವರೆಗೆ ಮಾತ್ರ ಬಳಕೆಯಲ್ಲಿದ್ದವು. ಮನಶ್ಯಾಸ್ತ್ರದ ಬಗೆಗಿನ ಮಾಹಿತಿಗಳನ್ನು ಸಂದೇಶಗಳ ಮೂಲಕ ಸುದ್ದಿರವಾನೆ ಮಾಡುವುದನ್ನೂ ಸಹ ನಿಷೇಧಿಸಲಾಯಿತು.
ಧಾರಾವಾಹಿಗಳಲ್ಲಿ ಹಾಗೂ ಚಲನಚಿತ್ರಗಳಲ್ಲಿ 'ಎದುರುತ್ತರ ಕೊಡುವುದು, ಕದಿಯುವುದು, ಹೊಡೆದಾಟ, ಬಲತ್ಕಾರ, ಕೊಲೆ' ಮುಂತಾದ ಅನೇಕ ಅನೈತಿಕತೆಯ ವಿಷಯಗಳಿರುತ್ತವೆ. ಆದುದರಿಂದ ಮಕ್ಕಳಿಗೆ ಅದೇ ಅಭ್ಯಾಸವಾಗುತ್ತದೆ. ಇನ್ನು ಭೂತಗಳ (ಮಾಲಿಕೆ) ಧಾರಾವಾಹಿಗಳನ್ನು ನೋಡಿ ಮಕ್ಕಳು ಹೆದರುತ್ತಾರೆ ಹಾಗೂ ರಾತ್ರಿ ಕೆಟ್ಟ ಕನಸು ಬೀಳುವುದರಿಂದ ಬೆದರಿಕೊಂಡು, ಕಿರುಚುತ್ತಾ ಅಥವಾ ಅಳುತ್ತಾ ನಿದ್ರೆಯಿಂದ ಎಚ್ಚರಗೊಳ್ಳುತ್ತಾರೆ.
ಪರೀಕ್ಷೆ ಹತ್ತಿರ ಬಂದರು ಸಹ ಮಕ್ಕಳಿಗೆ ದೂರದರ್ಶನದಲ್ಲಿನ ಕಾರ್ಯಕ್ರಮವನ್ನು ನೋಡುವ ಮೋಹವು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳಿಂದ ಅಪೇಕ್ಷೆಯಂತೆ ಅಧ್ಯಯನವಾಗದಿರುವುದರಿಂದ ಅವರ ಮುಂದಿನ ಜೀವನದ ಮೇಲೆ ವಿಪರೀತ ಪರಿಣಾಮವಾಗುವುದು
ಜವಾಬ್ದಾರಿಯುತ ದೂರದರ್ಶನ ವೀಕ್ಷಣೆ :-
ಇಷ್ಟರ ತನಕ ನಮಗೆ ಹೆಚ್ಚು ಸಮಯ ದೂರದರ್ಶನ ನೋಡುವ ಅಭ್ಯಾಸವಿದ್ದರೆ, ಅದನ್ನು ಹಂತ-ಹಂತವಾಗಿ ಕಡಿಮೆಗೊಳಿಸುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಮೊದಮೊದಲು ರಜೆಯ ದಿನಗಳಲ್ಲಿ ಒಂದು ಗಂಟೆಯಷ್ಟು ಸಮಯ ಕಾರ್ಯಕ್ರಮ ನೋಡಬೇಕು ಹಾಗೂ ಪರೀಕ್ಷೆ ಹತ್ತಿರ ಬರುವಾಗ ದೂರದರ್ಶನ ನೋಡುವುದನ್ನು ಸಂಪೂರ್ಣ ನಿಲ್ಲಿಸಬೇಕು. ‘ರಾಮಾಯಣ, ಮಹಾಭಾರತ, ಛತ್ರಪತಿ ಶಿವಾಜಿ ಮಹಾರಾಜ, ಸಂತ ಮಹಾತ್ಮರ ಜೀವನ ಚರಿತ್ರೆಯನ್ನು ಆಧಾರಿತ ಚಲನಚಿತ್ರ ಅಥವಾ ಧಾರಾವಾಹಿಯೊಂದಿಗೆ ನಮ್ಮ ಜ್ಞಾನವನ್ನು ವೃದ್ಧಿಗೊಳಿಸುವಂತಹ (ಉದಾ. ಡಿಸ್ಕವರಿ, ನ್ಯಾಶನಲ್ ಜಿಆಗ್ರಾಫಿ ಚಾನೆಲ್, ಸಂಸ್ಕಾರ ವಾಹಿನಿ (ಚಾನೆಲ್)) ಮತ್ತು ರಾಷ್ಟ್ರ ಹಾಗೂ ಧರ್ಮ ಪ್ರೇಮವನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ಸೀಮಿತವಾಗಿ ವೀಕ್ಷಿಸಬಹುದು.
ಇತ್ತೀಚೆಗಿನ ಮಕ್ಕಳು ಗಂಟೆಗಟ್ಟಲೆ ಪಾಶ್ಚಾತ್ಯರು ನಿರ್ಮಿಸಿದ ‘ಟಾಮ್ ಎಂಡ್ ಜೆರಿ’ಯಂತಹ ನಿರರ್ಥಕ ಹಾಗೂ ಕೇವಲ ಮನೋರಂಜನೆಗಾಗಿರುವ ಕಿರುಚಿತ್ರವನ್ನು ನೋಡುತ್ತಾ ಕುಳಿತಿರುತ್ತಾರೆ. ಈ ಕಿರುಚಿತ್ರದಲ್ಲಿ ಕೇವಲ ಹೊಡೆದಾಟವನ್ನೇ ತೋರಿಸಲಾಗುವುದರಿಂದ ಅದರಿಂದ ಯಾವುದೇ ಬೋಧನೆ ದೊರೆಯುವುದಿಲ್ಲ. ಅದಕ್ಕಿಂತ ಮಕ್ಕಳು ಪಂಚತಂತ್ರದಲ್ಲಿರುವ ವಿಷಯಗಳನ್ನು ಓದಿದರೆ ಅದರಿಂದ ಅವರಿಗೆ ನೀತಿಶಾಸ್ತ್ರ ಹಾಗೂ ವ್ಯವಹಾರವನ್ನು ಯಶಸ್ವಿಯಾಗಿ ನಿರ್ವಹಿಸುವ ಜ್ಞಾನ ಸಿಗುವುದು