Summary of Shravana Bantu kadige poem by D.R. Bendre
Answers
Summary of Shravana Bantu kadige poem by D.R. Bendre
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ೩೧-೦೧-೧೮೯೬ ರಲ್ಲಿ ಧಾರ್ವಾಡಲ್ಲಿ ಜನಿಸಿದರು. ಅಂಬಿಕಾತನಯದತ್ತ ಅವರ ಕಾವ್ಯ ನಾಮ.
ಶ್ರಾವಣ ಬಂತು ಕಾಡಿಗೆ
ಸಾರಾಂಶ
ಬೇಂದ್ರೆಯವರು "ಶ್ರಾವಣ ಬಂತು ಅಡಿಗೆ" ಪದ್ಯವನ್ನು ಪ್ರಕೃತಿಯ ವರ್ಣನೆಯನ್ನು ಹಲವು ವೈಶಿಷ್ಟತೆ ಮತ್ತು ವೈಭವಯುತವಾಗಿ ವರ್ಣಿಸಿದ್ದಾರೆ.
ಕವಿಯ ಕಲ್ಪನೆಯಲ್ಲ ಮತ್ತು ಪ್ರಕೃತಿಯ ಶ್ರಾವಣ ಮಾಸವು ಬಹು ಮುಖ್ಯವಾಗಿ ಕಂಡು ಬಂದಿದೆ. ಆ ಸಂಧರ್ಭದಲ್ಲಿ ಪ್ರಕೃತಿಯ ಬಿರುಬಿಸಿಲಿನ ತಾಪದಿಂದ ಹೊರಬಂದು ತನ್ನೆಲ್ಲ ಎಲೆಯ ಹೊಸ ಚಿಗುರನ್ನು ತಂದುಕೊಂಡು ಸಂಭ್ರಮಿಸುವ ಹಂತವಾಗಿದೆ.
ಶ್ರಾವಣ ಮಾಸವು ಕಾಡಿಗೆ ಮತ್ತು ನಾಡಿಗೆ ಬಂದಿದೆ ಎಂದು ಹೇಳುತ್ತಾ, ಅದರ ಸಂತೋಷವನ್ನು ಅನುಭವಿಸಿದೆ ಮಾರ್ಮಿಕವಾಗಿ ರಾವಣನ ಕುಣಿತಕ್ಕೆ, ಭೈರವ ಕುಣಿತಕ್ಕೆ ಹೋಲಿಸಲಾಗಿದೆ.
ಶ್ರಾವಣದ ಆಗಮನವಾದರೆ ಅದು ಬೆಟ್ಟಗಳನ್ನು ಆವರಿಸುವುದು ಪಟ್ಟಾಭಿಷೇಕ ಕಾಣುತ್ತದೆ.
ನಾಡಿನಲ್ಲೆಡೆ ಹೊಳೆ, ತೊರೆ, ಹಳ್ಳದಲ್ಲಿ ನೀರು ತುಂಬಿ ಹರಿಯುತ್ತದೆ. ಮಳೆರಾಯ ಮಳೆಯನ್ನು ಸುರಿಸಲು ಆರಂಭಿಸುತ್ತಾನೆ. ಈ ಸೌಂದರ್ಯದಲ್ಲಿ ಭೂಮಿ ಮಗ್ನವಾಗಿ ಕಾಣುತ್ತದೆ.
ಶ್ರಾವಣ ಊರು ಕೆರೆಯನ್ನು ಪ್ರವೇಶಿಸಿದಮೇಲೆ ಜೀವಕಳೆ ತುಂಬಿ ಬರುತ್ತದೆ. ನಾಡಿನೆಲ್ಲೆಡೆ ಜೋಕಾಲಿ ಆಡಿ ಸಂಭ್ರಮ ಪಡುತ್ತಾರೆ. ಮನೆಮನೆಯನ್ನು ಪ್ರವೇಶಿಸುವ ಶ್ರಾವಣದ ಸಂಭ್ರಮ ಜನರ ಧ್ವನಿಯಲ್ಲಿ ಮನಸ್ಸಿನಲ್ಲಿ ತುಂಬಿ ತುಳುಕುತ್ತದೆ.