Math, asked by Anonymous, 9 months ago

ಸ್ವರಗಳು ಎಂದರೆ ಏನು
swaragalu endary enu ​

Answers

Answered by michaelgimmy
7

ಸ್ವರಗಳು : ಸ್ವತಂತ್ರವಾಗಿ ಉಚ್ಚರಿಸಲಾಗುವ ಅಕ್ಷರಗಳಿಗೆ ಸ್ವರಗಳು ಎನ್ನುವರು.

ಒಟ್ಟು ೧೩ ಸ್ವರಗಳಿವೆ. ಅವು -

ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ

ಸ್ವರಗಳಲ್ಲಿ ೨ ವಿಧಗಳಿವೆ :-

ಹ್ರಸ್ವಸ್ವರ :

ಒಂದು ಮಾತ್ರಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳಿಗೆ ಹ್ರಸ್ವಸ್ವರಗಳು ಎನ್ನುವರು.

ಅವು - ಅ, ಇ, ಉ, ಋ, ಎ, ಒ

ದೀರ್ಘ ಸ್ವರ :-

ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲಾಗುವ ಅಕ್ಷರಗಳಿಗೆ ದೀರ್ಘ ಸ್ವರಗಳು ಎನ್ನುವರು.

ಅವು - ಆ, ಈ, ಊ, ಏ, ಐ, ಓ, ಔ

ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ....

Please Give a Thanks and Mark this Answer as the Brainliest....

ಶುಭ ದಿನ..

Similar questions