India Languages, asked by mlathapavani8, 6 months ago

tenail rama Krishna stories in
kannda full correct answer free point fast answer​

Answers

Answered by ramaraoyeluri
0

Answer:

you can see tenali rama krishna serial in zee telugu..

Answered by Anonymous
26

\huge\rm\underline{\bold \red{❥}{ᴀ᭄ɴsᴡᴇʀ\purple{\huge{\checkmark}}}}

Answer:

ವಿಕಟಕವಿ ತೆನಾಲಿ ರಾಮಕೃಷ್ಣ ತನ್ನ ಹಾಸ್ಯಪ್ರಜ್ಞೆಯಿಂದ ವಿಜಯನಗರದ ಮಹಾನ್ ಸಾಮ್ರಾಟ ಶ್ರೀಕೃಷ್ಣ ದೇವರಾಯನಿಗೆ ಅತ್ಯಂತ ಹತ್ತಿರವಾದನು. ರಾಯ ಪ್ರತಿಯೊಂದಕ್ಕು ಅವನ ಸಲಹೆ ಕೇಳುವಷ್ಟು ಅವನ ಸ್ನೇಹ ಪಸರಿಸಿತ್ತು. ರಾಮಕೃಷ್ಣನಿಲ್ಲನಿದ್ದರೆ ರಾಯನ ಮನ ನೀರಿನಿಂದ ಆಚೆ ಬಂದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿತ್ತು. ಆದರೆ ರಾಮಕೃಷ್ಣನಿಗೆ ರಾಯನನ್ನು ಪರೀಕ್ಷಿಸುವ ಆಸೆಯಾಯಿತು. ಅದಕ್ಕಾಗಿ ಆತ ಒಂದು ಉಪಾಯವನ್ನು ಹೆಣೆದನು. ಒಂದಿನ ಬೇಕಂತಲೆ ಅರಮನೆಗೆ ತಡವಾಗಿ ಹೋದನು. ರಾಯ ಅವನಿಗಾಗಿ ಕಾಯುತ್ತಾ ಕುಳಿತ್ತಿದ್ದನು. ಅವನು ಹೋಗುತ್ತಿದ್ದಂತೆಯೇ ರಾಯ ಅವನಿಗೆ “ನಾನು ಕಾಯುತ್ತಿರುತ್ತೇನೆ ಎಂಬುದು ಗೊತ್ತಿದ್ದರೂ ಯಾಕೆ ತಡವಾಗಿ ಬಂದೆ?” ಎಂದು ಕೇಳಿದನು. ಅದಕ್ಕೆ ರಾಮಕೃಷ್ಣ “ಹಾಗೇನಿಲ್ಲ ಪ್ರಭು, ನಿಮ್ಮನ್ನು ಕಾಯಿಸಿ ಬೇಸರಿಸುವಂಥ ಉದ್ದೇಶ ಖಂಡಿತವಿಲ್ಲ ಪ್ರಭು” ಎಂದು ಸಮಜಾಯಿಸಿ ನೀಡಿದನು. ಆದರೆ ಅವನ ಸಮಜಾಯಿಸಿಗೆ ಸುಮ್ಮನಾಗದೆ ರಾಯ ಅವನಿಗೆ “ಏಕೆ ತಡವಾಗಿ ಬಂದೆ?” ಎಂದು ಮರುಪ್ರಶ್ನಿಸಿದನು. ಆಗ ರಾಮಕೃಷ್ಣ “ಏನಿಲ್ಲ ಪ್ರಭು, ಯಾವುದೋ ಕಾರಣಕ್ಕೆ ಇವತ್ತು ಮುಂಜಾನೆ ಪಂಚಾಂಗವನ್ನು ನೋಡುತ್ತಿದ್ದೆ. ನನ್ನ ಭವಿಷ್ಯವನ್ನು ನೋಡಬೇಕನಿಸಿತು. ಅದಕ್ಕಾಗಿ ಗ್ರಹಗತಿಗಳನ್ನು ತಾಳೆ ಮಾಡಿ ನೋಡಿದೆ. ನೋಡಿದ ನಂತರ ನನ್ನೆದೆ ಒಡೆದು ಹೋಯಿತು. ಏಕೆಂದರೆ ಎರಡು ವಕ್ರ ಗ್ರಹಗಳು ಒಂದೇ ರೇಖೆಯಲ್ಲಿ ಬಂದಿವೆ. ನನ್ನ ಸಾವು ಸಮೀಪಿಸುತ್ತಿದೆ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಗತಿಯೇನು? ಎಂದು ಚಿಂತಿಸುತ್ತಿದ್ದೆ. ಸಮಯ ಸರಿದಿದ್ದೆ ಗೊತ್ತಾಗಲಿಲ್ಲ. ಅದಕ್ಕೆ ತಡವಾಗಿ ಬಂದೆ…” ಎಂದೇಳಿ ಕೊಂಚ ದು:ಖದಲ್ಲಿ ಮುಳುಗಿರುವಂತೆ ನಾಟಕವಾಡಿದನು. ಅವನ ನಾಟಕವನ್ನು ನಿಜವೆಂದು ನಂಬಿ ಶ್ರೀಕೃಷ್ಣ ದೇವರಾಯ ಆಘಾತಕ್ಕೊಳಗಾದನು. ಅವನ ಕೋಪ ಕೆಲವೇ ಕ್ಷಣಗಳಲ್ಲಿ ಕರಗಿತು. ಅವನಿಗೆ ರಾಮಕೃಷ್ಣನ ಮೇಲೆ ಕನಿಕರ ಹುಟ್ಟಿತು. ಅದೇ ಭರದಲ್ಲಿ ರಾಯ ರಾಮಕೃಷ್ಣನಿಗೆ “ಸಾವು ಯಾರನ್ನು ಬಿಟ್ಟಿಲ್ಲ. ಒಂದು ವೇಳೆ ನಿನಗೇನಾದರೂ ಆದರೆ ನಿನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮದಾಗುತ್ತದೆ. ನೀನು ಈ ವಿಷಯದ ಬಗ್ಗೆ ಚಿಂತಿಸದಿರು…” ಎಂದೇಳಿ ತನ್ನ ಅಭಯ ಹಸ್ತವನ್ನು ಚಾಚಿದನು. ರಾಮಕೃಷ್ಣ ರಾಯನಿಗೆ ವಂದಿಸಿ, ಎಲ್ಲ ಕಾರ್ಯಕಲಾಪಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ಸಮಾಧಾನದಿಂದ ಮನೆಗೆ ತೆರಳಿದನು.


Anonymous: ye laungage kaise ayi apko
Similar questions