Geography, asked by an0884459, 8 months ago

tree save essay in kannada ​

Answers

Answered by Vinay2106
1

Answer:

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನೆಲ್ಲೆಡೆ ಉಸಿರಾದ ಹಸಿರನ್ನು ಉಳಿಸಲು ಆಂದೋಲನಗಳು ನಡೆಯುತ್ತಿವೆ, ಪರಿಸರ ಉಳಿವಿಗಾಗಿ ಜನಜಾಗೃತಿ ಮೂಡಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಸ್ಪಂದಿಸಬೇಕಾದ ಮಾನವ ಕಾಡು, ಹಸಿರು, ಕಾಡು ಮೃಗಗಳನ್ನು ಉಳಿಸಲು ಏನು ಮಾಡುತ್ತಿದ್ದಾನೆ? ಇಲ್ಲಿದೆ ಓದಿ ಮನಮುಟ್ಟುವ ಕವನ.

* ಮೋಹನಚಂದ ಪಾಟೀಲ

ಬೆಳೆದಿತ್ತು ನನ್ನ ಮನೆಯ ಹಿಂದೆ

ಒಳಹೊಕ್ಕಂತೆ ದಾರಿ ಕಿರಿದಾಗುವ ಹಸಿರು ಕಾಡು

ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಗಿಡಮರಗಳು

ಬಿಸಿಲು ಬಿಡದಂತೆ ಹೆಣೆದ ಎಲೆಯ ಬಲೆಗಳು

ಜೀವ ತೊಳೆವ ತೊರೆಗಳು ಜಲಪಾತಗಳು

ಜೀವ ಕೊಳೆಸುವ ಮಲೆತ ಮಲಿನ ಕೊಳಗಳು

ಹುಳಹುಪ್ಪಡಿ ವಿಷಜಂತುಗಳ ತಾಣಗಳು

ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಮೃಗಗಳು

ಇವೆಲ್ಲ ಬುದ್ಧಿಹೀನ ವಿಚಾರಹೀನ ಜೀವಿಗಳು

ಎಂದು ಹೆದರಿ ನಾನೋಡಿ ಹೊರ ಬಂದೆ

ಅವನ್ನು ಒಂದೊಂದಾಗಿ ಕೊಂದು ನಾಶಮಾಡಿದೆ

ಮನೆಯ ಹಿಂದಿನ ಕಾಡು ಬಯಲು ಮಾಡಿದೆ

ಆದರೆ ಇಂದು ಕಾಡಿನ ಬೀಜ ಮೊಳೆತಿದೆ

ನನ್ನ ಮನದಲಿ ಹುಲುಸಾಗಿ ಬೆಳೆಯುತಿದೆ

ಇವೆಲ್ಲ ಬುದ್ಧಿ ತುಳಿದು ಬೆಳೆದ ಸ್ವಾರ್ಥಗಳು

ಹೊಟ್ಟೆ ಹೊರೆಯಲೆಂದೇ ಬಲಿಷ್ಟವಾದ ಜನಗಳು

ಹುಳಹುಪ್ಪಡಿ ವಿಷಜಂತುಗಳ ಕಣಜಗಳು

ಜೀವ ಕೊಳೆಸುವ ಕೊಳಕು ಚರಂಡಿಗಳು

ಜೀವ ತೊಳೆವ ಔಷಧಗಳು ಆಸ್ಪತ್ರೆಗಳು

ಬಿಸಿಲು ಬಿಡದಂತೆ ಹರಡಿದ ಮಾಲಿನ್ಯ ಮೋಡಗಳು

ಹೆಜ್ಜೆಯಿಡದಷ್ಟು ಹತ್ತಿ ಬೆಳೆದ ಕಟ್ಟಡಗಳು

ಒಳಹೊಕ್ಕಂತೆ ದಾರಿ ಕಿರಿದಾಗುವ ಜನರ ಕಾಡು

ಬೆಳೆದಿದೆ ನನ್ನ ಮನೆಯ ಮುಂದೆ

Explanation:

Similar questions