'ಅವಳು 'ಇದು
ನಾಮಪದ
ಸರ್ವನಾಮ
ಕ್ರಿಯಾಪದ
ವಿಭಕ್ತಿ ಪ್ರತ್ಯಯ
urgent
Answers
Dear friend
kannada
ನಾಮಪದ ಮತ್ತು ವಿಭಕ್ತಿ ಪ್ರತ್ಯಯ
ನಾಮಪದ
ನಾವು ಮಾತನಾಡುವ ಮಾತುಗಳಲ್ಲಿ ಅನೇಕ ಬಗೆಯ ಶಬ್ದಗಳಿರುತ್ತವೆ. ಆ ಶಬ್ದಗಳಿಗೆ ನಾವು ಬೇರೆ ಬೇರೆ ಹೆಸರು ಕೊಟ್ಟಿರುತ್ತೇವೆ. ಅಂದರೆ ಒಂದೊಂದು ಜಾತೀಯ ಶಬ್ದಗಳನ್ನು ಒಂದೊಂದು ಗುಂಪು ಮಾಡಿ ವ್ಯಾಕರಣದಲ್ಲಿ ಹೇಳುತ್ತೇವೆ. ಉದಾಹರಣೆಗೆ ಈ ಕೆಳಗಿನ ಮಾತುಗಳಲ್ಲಿಯ ಶಬ್ದಗಳನ್ನು ನೋಡಿರಿ.
೧. ಆತನು ಮನೆಯನ್ನು ಚೆನ್ನಾಗಿ ಕಟ್ಟಿದನು.
೨. ಒಕ್ಕಲಿಗರು ಕಷ್ಟದಿಂದ ಬೆಳೆಯನ್ನು ಬೆಳೆಯುವರು.
ಈ ವಾಕ್ಯಗಳಲ್ಲಿ:-
೧. ಆತನು, ಮನೆಯನ್ನು, ಒಕ್ಕಲಿಗರು, ಕಷ್ಟದಿಂದ, ಬೆಳೆಯನ್ನು-ಇವೆಲ್ಲ ನಾಮಪದಗಳು.
೨. ಕಟ್ಟಿದನು, ಬೆಳೆಯುವರು-ಇವು ಕ್ರಿಯಾಪದಗಳು.
೩. ಚೆನ್ನಾಗಿ - ಎಂಬುದು ಅವ್ಯಯ.
ಹೀಗೆ ನಾವು ಆಡುವ ಮಾತುಗಳನ್ನು ಮುಖ್ಯವಾಗಿ ಮೂರು ಗುಂಪುಗಳಾಗಿ ಮಾಡುತ್ತೇವೆ.
(೧) ನಾಮಪದ (೨) ಕ್ರಿಯಾಪದ (೩) ಅವ್ಯಯ – ಇವೇ ಆ ಮೂರು ಗುಂಪುಗಳು.
ಮನೆಯನ್ನು ಮನೆಯದೆಸೆಯಿಂದ
ಮನೆಯಿಂದ ಮನೆಯ
ಮನೆಗೆ ಮನೆಯಲ್ಲಿ
ಇವೆಲ್ಲ `ನಾಮಪದಗಳು‘. ಈ ಪದಗಳಲ್ಲೆಲ್ಲ `ಮನೆ‘ ಎಂಬುದು ಮೂಲರೂಪ. ಈ ಮೂಲರೂಪವಾದ ಮನೆ ಎಂಬ ಶಬ್ದವನ್ನು ನಾಮಪದದ ಮೂಲರೂಪ ಅಥವಾ ನಾಮಪ್ರಕೃತಿ ಎನ್ನುತ್ತೇವೆ.
ಕಟ್ಟಿದನು,** ಕಟ್ಟುವನು, ಕಟ್ಟುತ್ತಾನೆ, ಕಟ್ಟಿದರು, ಕಟ್ಟನು, ಕಟ್ಟುವಳು, ಕಟ್ಟಲಿ-ಇವೆಲ್ಲ ಕ್ರಿಯಾಪದಗಳು. ಇವುಗಳಿಗೆ ಮೂಲರೂಪ, ಕಟ್ಟು ಎಂಬುದು. ಈ ಕಟ್ಟು ಎಂಬ ಮೂಲರೂಪವು ಕ್ರಿಯಾಪದದ ಮೂಲರೂಪ. ಇದಕ್ಕೆ ಧಾತು ಎಂಬ ಇನ್ನೊಂದು ಹೆಸರುಂಟು.
ಚೆನ್ನಾಗಿ, ನೆಟ್ಟಗೆ, ಮೆಲ್ಲಗೆ ಮತ್ತು ಆದರೆ - ಇಂಥ ಕೆಲವು ಶಬ್ದಗಳು ಭಾಷೆಯಲ್ಲಿ ಬರುತ್ತವೆ. ಇವುಗಳು ಒಂದೇ ರೂಪವಾಗಿರುತ್ತವೆ. ನಾಮಪದ ಕ್ರಿಯಾಪದಗಳಂತೆ ಬೇರೆ ಬೇರೆ ರೂಪವನ್ನು ಹೊಂದುವುದಿಲ್ಲ. ಇವು ಬೇರಾವ ಮೂಲರೂಪದಿಂದಲೂ ಹುಟ್ಟಿಲ್ಲ. ಇವೇ ಮೂಲರೂಪಗಳು. ಇವುಗಳನ್ನು ಅವ್ಯಯವೆಂದು ಕರೆಯಬಹುದು.
ಹೀಗೆ ನಾವಾಡುವ ಮಾತುಗಳು, ಪದದ ಮೂರು ಗುಂಪುಗಳಾದ ನಾಮಪದಗಳು, ಕ್ರಿಯಾಪದಗಳು ಇಲ್ಲವೆ ಅವ್ಯಯಗಳಾಗಿರುತ್ತವೆ; ಇವುಗಳಲ್ಲಿ ಈಗ ನಾಮಪದಗಳ ವಿಚಾರವಾಗಿ ತಿಳಿಯೋಣ.
ಪದ ಎಂದರೆ ಮೂಲರೂಪ ಪ್ರಕೃತಿವೊಂದಕ್ಕೆ ಪ್ರತ್ಯಯ ಹತ್ತಿದ ರೂಪ. ಈ ಕೆಳಗೆ ನೋಡಿರಿ:-