Social Sciences, asked by archananaidu1987, 16 hours ago

write esaay writing on freedom fighter in kannada pls answer who will answer I will thank them or who will not answer it will be reported​

Answers

Answered by syedamehakfathima143
1

Answer:

ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ (೧೭೫೩ - ಮೇ ೪, ೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.

Explanation:

ದೇಶಭಕ್ತ ಹಜರತ್ ಟಿಪ್ಪು ಸುಲ್ತಾನರು ನಾಡು, ನುಡಿ, ಧರ್ಮ ರಕ್ಷಣೆ ಜೊತೆಗೆ ಹಿಂದೂ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿ, ಬ್ರಿಟಿಷರನ್ನು ಹೊಡೆದೋಡಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ನಿಟ್ಟಿನಲ್ಲಿ ದೇಶ ರಕ್ಷಣೆಗಾಗಿಯೇ ಹುತಾತ್ಮರಾಗಿದ್ದಾರೆ.

ಹಜರತ್ ಟಿಪ್ಪು ಸುಲ್ತಾನರ ಕುರಿತು ನಾವೆಲ್ಲ ಪ್ರಾಥಮಿಕ ಶಾಲೆ ಹಂತದಿಂದಲೇ ಶೈಕ್ಷಣಿಕವಾಗಿ ಅಭ್ಯಾಸ ಮಾಡಿದ್ದೇವೆ. ಅವರನ್ನು ವಿರೋಧಿಸುತ್ತಿರುವ ಇಂದಿನ ನಾಯಕರೂ ಅದನ್ನೇ ಅಭ್ಯಾಸ ಮಾಡಿದ್ದಾರೆ. ಆದರೆ, ಅವರ ವಿರುದ್ಧ ಕೆಲವರು ಮಾತ್ರ ತಿರುಗಿ ಬೀಳಲು ಅವರು ಮಾಡಿರುವ ಅಪರಾಧವಾದರೂ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ

ಕನ್ನಡ ಪ್ರೇಮಿ ಟಿಪ್ಪು: ಹಜರತ್ ಟಿಪ್ಪು ಸುಲ್ತಾನ ಅವರು 1750 ನವೆಂಬರ 10 ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಹೈದರಾಲಿ, ತಾಯಿ ಪಾತೀಮಾ ಫಕರುನ್ನೀಸಾ. ಅವರು ಬಾಲ್ಯದಲ್ಲಿಯೇ ಅನೇಕ ಯುದ್ಧ ಕೌಶಲ್ಯಗಳನ್ನು ತಮ್ಮ ತಂದೆ ಹೈದರಾಲಿ ಅವರೊಂದಿಗಿದ್ದ ಫ್ರೆಂಚ್ ಅಧಿಕಾರಿಗಳು ಹಾಗೂ ಅವರ ಗುರು ಮೊಹ್ಮದ ಫಲಕ್ಅಲಿ ಅವರಿಂದ ಕಲಿತಿದ್ದರು.

ಹಿಂದೂ ಮುಸ್ಲಿಂ ಭಾವೈಕ್ಯತೆ ಭಾವೈಕ್ಯತೆ ರೂಢಿಸಿಕೊಂಡಿದ್ದ ಅವರು ಕನ್ನಡ ಪ್ರೇಮಿಯಾಗಿದ್ದರು ಎಂಬುದು ಅವರ ಆಡಳಿತ ಭಾಷೆ ಕನ್ನಡವೇ ಆಗಿತ್ತು ಎಂಬುದು ಇತಿಹಾಸ

ಅಪ್ರತಿಮ ಸೇನಾ ನಾಯಕ

ಇತಿಹಾಸದಲ್ಲಿ ಮೈಸೂರು ಹುಲಿ ಎಂದೇ ಹೆಸರಾಗಿರುವ ಹಜರತ್ ಟೀಪೂ ಸುಲ್ತಾನರ ಮೂಲ ಹೆಸರು ಫಾತ್ ಅಲಿಖಾನ್ ಬಹದ್ದೂರ. ಅತಿ ಚಿಕ್ಕ ವಯಸ್ಸಿನಲ್ಲಿಯೇ 1767ರಲ್ಲಿ ನಡೆದ ಯುದ್ಧದಲ್ಲಿ ಸೇನೆಯ ಅಶ್ವ ದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ 1775 ರಿಂದ 1779ರ ಅವಧಿಯಲ್ಲಿ ಪೂರ್ಣ ಪ್ರಮಾಣದ ಸೇನಾ ನಾಯಕರಾಗಿ ಅವರು ಪ್ರಸಿದ್ಧಿ ಪಡೆದರು.

15ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ ಸೇನಾ ತುಕಡಿಯ ನಾಯಕರಾಗಿ ಕೆಲಸ ಮಾಡಿದರು. 1782ರ ಫೆಬ್ರುವರಿಯಲ್ಲಿ ಆಂಗ್ಲ ಸೇನಾ ನಾಯಕನಾಗಿದ್ದ ಬ್ರಾತ್ ವೈಟ್ನನ್ನು ಸೋಲಿಸಿದರೆಂಬುದು ಅವರ ಧೈರ್ಯ ಶೌರ್ಯಕ್ಕೆ ಸಾಕ್ಷಿ.

I am proud to be in Karnataka

Similar questions