India Languages, asked by bavitha3949, 11 months ago

yogasanadha mahathva essay in kannada wikipedia

Answers

Answered by AravindhPrabu2005
2

Answer:

ಯೋಗಾಭ್ಯಾಸವು ಒಂದು ಆಧ್ಯಾತ್ಮಿಕ ಆಚರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇಕೆ, ಅದು ಚಿರಂತನ ಮತ್ತು ಪರಿಪೂರ್ಣ ಸತ್ಯವೇ ಆದ ಆ ಭಗವಂತನೆಡೆಗೆ ಸಾಗುವುದಕ್ಕಿರುವ ಒಂದು ಅತಿಶಯವಾದ ಕಾರ್ಯಸಾಧ್ಯ ಮಾರ್ಗೋಪಾಯವೂ ಹೌದು. ಆದ್ದರಿಂದಲೇ ಯೋಗಾಭ್ಯಾಸವನ್ನು ಇಡೀ ಮಾನವಕುಲದ ಸ್ವತ್ತು ಎಂದೇ ಪರಿಗಣಿಸಲಾಗುತ್ತದೆ. ಯೋಗವೆಂಬುದು ಸ್ವತಃ ತನ್ನತನದೊಂದಿಗೆ ಮತ್ತು ಅದರ ಯುಕ್ತವಾದ ಚಹರೆಯೊಂದಿಗೆ ಮೌನಸಂವಾದ ನಡೆಸುವ ಒಂದು ಪ್ರಕ್ರಿಯೆ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆ. ಆತ್ಮದ ಅಥವಾ ತನ್ನತನದ ಕುರಿತಾದ ಅಜ್ಞಾನ, ಐಹಿಕ ವಸ್ತುಗಳೊಂದಿಗೆ ಮತ್ತು ಅದರ ಸಂಬಂಧವಾದ ಆಲೋಚನೆಗಳೊಂದಿಗೆ ಅಂಟಿಕೊಳ್ಳುವುದೇ ಮನುಷ್ಯ ಅನುಭವಿಸುವ ನೋವು ಹಾಗೂ ಕಡುಕಷ್ಟಗಳಿಗೆ ಕಾರಣ. ಯೋಗವನ್ನು ಸಮರ್ಪಕವಾಗಿ ಅಭ್ಯಾಸ ಮಾಡುವುದರಿಂದ ಈ ನೋವು ಮತ್ತು ಸಮಸ್ಯೆಗಳು ತಗ್ಗುವುದಲ್ಲದೆ, ಮನುಷ್ಯ ಹಾಗೂ ಭಗವಂತನ ನಡುವಿನ ಕಳಚಿದ ಕೊಂಡಿಯನ್ನು ಪುನರ್‌ಸ್ಥಾಪಿಸಲು ಸಾಧ್ಯವಾಗುತ್ತದೆ.

Answered by Anonymous
7

ಯಾವುದೋ ಒಂದು ಅಸಾಮಾನ್ಯವಾದ ಭಂಗಿಯಲ್ಲಿ ಕುಳಿತಾಗ, ದೇಹದ ಆ ಭಾಗದ ಅರಿವು, ಅದರಿಂದ ಬರುತ್ತಿರುವ ನೋವಿನಿಂದಾಗಿ ಉಂಟಾಗುತ್ತದೆ. ಆಗ ನಿಮ್ಮ ಗಮನವೆಲ್ಲವೂ ಅದರಿಂದ ಬರುತ್ತಿರುವ ಅಹಿತವಾದ ಸಂವೇದನೆಯ ಮೇಲೇ ಇರುತ್ತದೆ. ನೀವು ಯಾವುದೇ ಆಸನವನ್ನು ಮಾಡಿದಾಗ ನಿಮ್ಮ ಅನುಭವಕ್ಕೆ ಬರುವ ಮೊದಲನೆಯ ವಿಷಯವೆಂದರೆ ಅಹಿತಕರವಾದ ಸಂವೇದನೆ. ಅದರ ಮನಸ್ಸನ್ನು ಆ ಸಂವೇದನೆಯಲ್ಲಿ ನಡೆಸಿಕೊಂಡು ಹೋದಾಗ, ಕೆಲವೇ ಕ್ಷಣಗಳಲ್ಲಿ ಆ ಅಹಿತಕರವಾದ ಸಂವೇದನೆಯು ಮಾಯವಾಗಿ, ದೇಹದ ಅನುಭವವೂ ಮಾಯವಾಗುವುದನ್ನು ಕಾಣಬಹುದು.

ಯಾವುದೋ ಒಂದು ಅಸಾಮಾನ್ಯವಾದ ಭಂಗಿಯಲ್ಲಿ ಕುಳಿತಾಗ, ದೇಹದ ಆ ಭಾಗದ ಅರಿವು, ಅದರಿಂದ ಬರುತ್ತಿರುವ ನೋವಿನಿಂದಾಗಿ ಉಂಟಾಗುತ್ತದೆ. ಆಗ ನಿಮ್ಮ ಗಮನವೆಲ್ಲವೂ ಅದರಿಂದ ಬರುತ್ತಿರುವ ಅಹಿತವಾದ ಸಂವೇದನೆಯ ಮೇಲೇ ಇರುತ್ತದೆ. ನೀವು ಯಾವುದೇ ಆಸನವನ್ನು ಮಾಡಿದಾಗ ನಿಮ್ಮ ಅನುಭವಕ್ಕೆ ಬರುವ ಮೊದಲನೆಯ ವಿಷಯವೆಂದರೆ ಅಹಿತಕರವಾದ ಸಂವೇದನೆ. ಅದರ ಮನಸ್ಸನ್ನು ಆ ಸಂವೇದನೆಯಲ್ಲಿ ನಡೆಸಿಕೊಂಡು ಹೋದಾಗ, ಕೆಲವೇ ಕ್ಷಣಗಳಲ್ಲಿ ಆ ಅಹಿತಕರವಾದ ಸಂವೇದನೆಯು ಮಾಯವಾಗಿ, ದೇಹದ ಅನುಭವವೂ ಮಾಯವಾಗುವುದನ್ನು ಕಾಣಬಹುದು.ಮಗುವಿಗಿಂತ ದೊಡ್ಡ ಯೋಗ ಶಿಕ್ಷಕ ಮತ್ತೊಬ್ಬರಿಲ್ಲ.

Similar questions