ಕೋಮುವಾದ ದೇಶದ ಐಕ್ಯತೆಗೆ ಕಾರಣ ಹೇಗೆ?
Answers
Answer:
Hyy
ಕೋಮುವಾದವನ್ನು ಸೋಲಿಸುವುದು, ಕೋಮುವಾದಿಗಳನ್ನು ಸೋಲಿಸುವುದು ಎರಡೂ ಒಂದರೊಡನೊಂದು ಹೆಣೆದುಕೊಂಡಿದೆ.
ಕೋಮುವಾದದ ವಿರುದ್ಧ ಜನರಿಗೆ ಅರಿವು ಮೂಡಿಸದೆ, ಜನರೇ ಕೋಮುವಾದವನ್ನು ತಿರಸ್ಕರಿಸುವಂತೆ ಮಾಡದೆ ಕೋಮುವಾದವನ್ನು ಸೋಲಿಸಲು ಸಾಧ್ಯವಿಲ್ಲ.
ಕೋಮುವಾದದ ಬಗ್ಗೆ ಮಾತೇ ಆಡದೆ, ಕೋಮುವಾದದ ದಾಂಧಲೆಗಳಿಗೆ ತಳಮಟ್ಟದಲ್ಲಿ ಎದುರಾಗದೆ, ವೈಯಕ್ತಿಕವಾಗಿ ವಿಶ್ವ ಹಿಂದೂ ಪರಿಷತ್‌ನಂತಹ ಕೋಮುವಾದಿ ಸಂಘಟನೆಗಳ ಸಭೆಗಳಲ್ಲಿ ಎಗ್ಗಿಲ್ಲದೆ ಭಾಗವಹಿಸುವ, ಹಿಂದೆ ನಿಂತು ಬೆಂಬಲಿಸುವ , ತಮ್ಮ ಕ್ಷೇತ್ರದಲ್ಲಿ ಕೋಮುವಾದಿಗಳ ಬೆಳವಣಿಗೆಯನ್ನು ತಡೆಯುವ ಯಾವ ಪ್ರಯತ್ನ ಮಾಡದೆ ತಟಸ್ಥ ಧೋರಣೆ ವಹಿಸುವುದು, ಕೋಮುವಾದಿಗಳ ಚಿಂತನೆಗಳೊಂದಿಗೆ ಸಹಮತ ಹೊಂದಿರುವುದು ಇಂತಹ ವರ್ತನೆಗಳನ್ನು ಜಾತ್ಯಾತೀತ ಎಂಬ ಪಕ್ಷಗಳಲ್ಲಿ ನೋಡುತ್ತಿದ್ದೇವೆ.
ಆ ಪಕ್ಷಗಳ ನಾಯಕರಲ್ಲಿ ಮುಖ್ಯವಾದ ಚಿಂತನೆ ಎಂದರೆ ಅವರು ಅಧಿಕಾರದಲ್ಲಿರುವ, ಅಧಿಕಾರಕ್ಕೆ ಬರಬಹುದಾದ ಪಕ್ಷದಲ್ಲಿ ಸ್ಥಾನ ಪಡೆದುಕೊಳ್ಳಬೇಕು. ಅದಾದರೂ ಅಷ್ಟೇ, ಇದಾದರೂ ಅಷ್ಟೇ. ತಮ್ಮ ವ್ಯವಹಾರ, ದುರ್ವ್ಯವಹಾರಗಳಿಗೆ, ಭ್ರಷ್ಟಾಚಾರಗಳಿಗೆ ಅವಕಾಶ ಮತ್ತು ರಕ್ಷಣೆ ಬೇಕು ಅಷ್ಟೇ. ಆ ಪಕ್ಷದಲ್ಲಿದ್ದರೆ ಅವರಂತೆ, ಈ ಪಕ್ಷದಲ್ಲಿದ್ದರೆ ಇವರಂತೆ . ಅಲ್ಲಿದ್ದರೆ ಕೋಮುವಾದಿ, ಇಲ್ಲಿದ್ದರೆ ಜಾತ್ಯಾತೀತ.
ಇವರು ಯಾವಾಗ ಬೇಕಾದರೂ ಯಾವ ಪಕ್ಷಕ್ಕೆ ಬೇಕಾದರೂ ಜಿಗಿಯುವಂತಹವರು. ಈ ಜಾತ್ಯಾತೀತ ಪಕ್ಷಗಳೆಂಬುವಕ್ಕೂ ಅಂತಹವರನ್ನು ಸೇರಿಸಿಕೊಳ್ಳಲು ಯಾವ ಸಿಗ್ಗೂ ,ಅಡ್ಡಿಯೂ ಇಲ್ಲ.
ಜಾತ್ಯಾತೀತ ಪಕ್ಷಗಳೆಂಬುದರ ಕಾರ್ಯಕರ್ತರಿಗೆ, ಎಂಎಲ್‌ಎ, ಎಂಪಿ, ಮಂತ್ರಿ ಮಾನ್ಯರುಗಳಿಗೂ ಜಾತ್ಯಾತೀತತೆ, ಕೋಮುವಾದ, ಫ್ಯಾಸಿಸಂ ಎಂದರೇನು, ಅದರ ವಿವಿಧ ಆಯಾಮಗಳೇನು ಎಂಬುದರ ಬಗ್ಗೆ ಅರಿವೂ ಇಲ್ಲ ಮತ್ತು ಚಿಂತೆಯೂ ಇಲ್ಲ. ಈ ಪಕ್ಷಗಳ ಸರ್ವೋಚ್ಚ ನಾಯಕರಿಗೂ ಕೂಡಾ ಇವುಗಳ ಬಗ್ಗೆ ಅಧ್ಯಯನವಿಲ್ಲ. ಹಿಂದೂ ಮುಸ್ಲಿಂ ಜಗಳವಿಲ್ಲದುದೇ ಜಾತ್ಯಾತೀತತೆ ಎಂಬ ತೆಳು ಕಲ್ಪನೆಯಷ್ಟೇ ಅವರಿಗೆ.
ಹೀಗಾಗಿ ಅವರ ಮಾತು, ಭಾಷಣಗಳಲ್ಲಿ ಅವರ ಪಕ್ಷದೊಳಗಿನ ಚರ್ಚೆಗಳಲ್ಲಿ ಕೂಡಾ ಕೋಮುವಾದ, ಜಾತ್ಯಾತೀತತೆಯ ಬಗ್ಗೆ ಮಾತುಗಳೇ ಇರುವುದಿಲ್ಲ. ಕೋಮುವಾದದ ಹಲವು ರೂಪಗಳಿಗೆ ಇವರಲ್ಲಿ ಉತ್ತರವಿರುವುದಿಲ್ಲ. ಒಂದಾನೊಂದು ಕಾಲದಲ್ಲಿ ನೆಹರೂರಂತಹ ಕೈಬೆರಳೆಣಿಕೆಯ ಜನರಿಗಷ್ಟೇ ಈ ವಿಷಯಗಳ ಅಧ್ಯಯನ ಇದ್ದದ್ದು.
ತಮಗೆ ಬೆಂಬಲ ನೀಡುವ ಅಪಾರ ಜನರಲ್ಲಿ ಕೋಮುವಾದ, ಫ್ಯಾಸಿಸಮ್, ಜಾತ್ಯಾತೀತತೆಗಳ ಬಗ್ಗೆ ಪ್ರಾಥಮಿಕ ಅರಿವೂ ಮೂಡಿಸುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಅದರಿಂದಾಗಿ ಜನ ಸಮುದಾಯಗಳು ಕೋಮುವಾದಕ್ಕೆ ಸುಲಭವಾಗಿ ಬಲಿ ಬೀಳುವಂತಹವರು.
ಇದು ಈಗಿನ ನಮ್ಮ ದೇಶದ ಪಾಲಿಟಿಯ ಸ್ಥಿತಿ. ಅದರಿಂದಾಗಿ ಪಾಲಿಟಿಕ್ಸ್‌ನ ದುಸ್ಥಿತಿ.
ಇಂದಿನ ಚುನಾವಣೆಯ ಸಂದರ್ಭದಲ್ಲಿ ಈ ಎಲ್ಲ ಸಂಗತಿಗಳ ಬಗ್ಗೆ ಪೂರ್ಣ ಅರಿವಿನೊಂದಿಗೇ ಪ್ರಜ್ಞಾವಂತರು ನಿರ್ಧಾರ ಕೈಗೊಳ್ಳಬೇಕಾಗಿದೆ.
ಕೋಮುವಾದ ಬೆಳೆಯಲು ಜಾತ್ಯಾತೀತ ಕಾರಣಗಳು-
ಕೇಂದ್ರದಲ್ಲಿ 25 ವರ್ಷಗಳ ನಂತರ ಬಹುಮತ ಪಡೆದ ಏಕಮಾತ್ರ ಪಕ್ಷವಾಗಿ ಗೆದ್ದ ಬಿಜೆಪಿ ಪಡೆದ ಶೇ.31 ಮತಗಳಲ್ಲಿ ಕೋಮುವಾದಿ- ಅಂದರೆ ಮುಸ್ಲಿಂ ದ್ವೇಷ, ಹಿಂದೂತ್ವ ಪ್ರೇಮಕ್ಕಾಗಿ ನೀಡಿದ ಮತಗಳೆಷ್ಟು ಮತ್ತು ಕಾಂಗ್ರೆಸ್- ಯುಪಿಎ ಆಡಳಿತದ ವಿರುದ್ಧದ ಸಿಟ್ಟಿನಿಂದ ಪಡಕೊಂಡ ಜಾತ್ಯಾತೀತ ಪ್ರಜೆಗಳ ಮತಗಳೆಷ್ಟು ಎಂಬ ಬಗ್ಗೆ ಸರಿಯಾದ ಶೋಧ ಮತ್ತು ವಿಶ್ಲೇಷಣೆ ನಡೆದಿಲ್ಲ.
ಆದರೆ ಕೋಮುವಾದಿ ಮತಗಳ ಪ್ರಮಾಣ ಬಹಳ ಕಡಿಮೆ ಎಂಬುದನ್ನಂತೂ ಸ್ಪಷ್ಟವಾಗಿ ಹೇಳಬಹುದು. ಯುಪಿಎ ಬಗ್ಗೆ ಸಿಟ್ಟಿದ್ದರೂ ಸೆಕ್ಯುಲರ್ ಮತದಾರರು ಬಿಜೆಪಿಗೆ ಒಲಿಯುವುದು ಸುಲಭವಾಗಿರಲಿಲ್ಲ. ಸೆಕ್ಯುಲರ್ ಮತದಾರರಿಗೆ ಆರೆಸ್ಸೆಸ್- ಬಿಜೆಪಿಯ ಕೋಮು ದಂಗೆಗಳು ಮುಖ್ಯವಾಗಿ ಗುಜರಾತ್‌ನ ಮಾರಣಹೋಮಗಳಿಂದಾಗಿ ಬಿಜೆಪಿ ಬಗ್ಗೆ ಜನರಿಗೆ ಅಸಹ್ಯ ಭಾವನೆ ಉಂಟಾಗಿತ್ತು . ಈ ಕಾರಣದಿಂದಾಗಿ ಪ್ರಧಾನಿ ಹುದ್ದೆಗೆ ಬಿಂಬಿತವಾಗಲು ಮೋದಿಯವರಿಗೇ ಹಿಂಜರಿಕೆಯಿತ್ತು. ಆರೆಸ್ಸೆಸ್‌ಗೆ ಕೂಡಾ ಧೈರ್ಯವಿರಲಿಲ್ಲ.
ಆಗ ಮೋದಿ, ಬಿಜೆಪಿಯ ನೆರವಿಗೆ ಬಂದವರು ನಮ್ಮ ದೇಶದ ಮತ್ತು ವಿದೇಶದ ಬೃಹತ್ ಕಾರ್ಪೊರೇಟ್‌ಗಳು. ಅಂಬಾನಿ ನೇತೃತ್ವದಲ್ಲಿ ಅವರನ್ನು ಭೇಟಿಯಾಗಿ ಅವರ ಮೇಲಿನ ದುರಭಿಪ್ರಾಯವನ್ನು ಮರೆಸಲು ಹಾಗೂ ವಿಕಾಸ ಪುರುಷನೆಂದು ಬಿಂಬಿಸಲು ತಮ್ಮೆಲ್ಲಾ ಟಿವಿ, ಪತ್ರಿಕೆಗಳ ಒಡೆತನವನ್ನು ಬಳಸಿ ದೊಡ್ಡ ಪ್ರಮಾಣದ ಬಿಟ್ಟಿ ಪ್ರಚಾರ ನೀಡುವ ಅಶ್ವಾಸನೆ ನೀಡಿದರು.
ಅದನ್ನು ಮೀರಿ ಜಾಹೀರಾತುಗಳಿಗೆ, ಸಾಮಾಜಿಕ ಜಾಲ ತಾಣಗಳು, ವಿದೇಶಿ ಸಲಹೆಗಾರರುಗಳಿಗೆ ಮತ್ತು ಕ್ಷೇತ್ರಗಳಲ್ಲಿ ಹಣ ಎರಚಲು ಹಣ ಹೂಡಿದರು.
2004 ರಿಂದ 2014 ರವರೆಗೂ ಕಾಂಗ್ರೆಸ್‌ಗೆ ಆಧಾರವಾಗಿದ್ದ ಮತ್ತು ಆ ಸರ್ಕಾರದಿಂದ ಪಡೆಯಬಹುದಾದ ಎಲ್ಲ ಲಾಭ ಪಡೆದಿದ್ದ ಈ ಕಾರ್ಪೊರೇಟ್‌ಗಳು ಬಹುದೊಡ್ಡ ಪ್ರಮಾಣದಲ್ಲಿ ಬಿಜೆಪಿಯ ಕಡೆಗೆ ತಿರುಗಿದರು. ಅವರ ಈ ದೃಢ ಬೆಂಬಲವೇ ಮೋದಿಯ ದುರ್ನೀತಿಗಳ ಬಗ್ಗೆ ಜನರಲ್ಲಿ ಸಿಟ್ಟು ಸಿಡಿದೇಳದಂತೆ ತಡೆದಿರುವುದು. ಹೀಗೆ ಜನರ ಸಿಟ್ಟು, ಕಾರ್ಪೊರೇಟ್ ಹಣ , ಮಾಧ್ಯಮ ಸ್ವಾಮ್ಯ ಕೂಡಿ ಸೆಕ್ಯುಲರ್ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿ ಬುಟ್ಟಿಗೆ ಬೀಳಲು ಕಾರಣವಾಯಿತು.
ಇವುಗಳ ಜೊತೆಗೆ ಯುಪಿಯಲ್ಲಿ ಅಮಿತ್ ಶಾ ಎಬ್ಬಿಸಿದ ಮುಜಾಫರ್ ನಗರದ ಕೋಮುಗಲಭೆಗಳು , ಅದನ್ನು ನಿಯಂತ್ರಣ ಮಾಡುವಲ್ಲಿ ಎಸ್.ಪಿ. ಪಕ್ಷದ ಸರ್ಕಾರ ಹಾಗೂ ಬಿಎಸ್‌ಪಿ ಪಕ್ಷದ ವೈಫಲ್ಯಗಳು ಕೂಡಾ ಬಿಜೆಪಿಯ ಸ್ಥಾನಗಳು ಹೆಚ್ಚಲು ಕಾರಣವಾಗಿದೆ.
ಬಿಜೆಪಿಯ ಖಾಯಂ ಕೋಮುವಾದಿ ಮತಗಳ ಗಣನೀಯ ಸಂಖ್ಯೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಅಸ್ತಿತ್ವದಲ್ಲಿರುವ ಕೌಬೆಲ್ಟ್ ಎಂದು ಪರಿಗಣಿತವಾದ ರಾಜ್ಯಗಳೇ ಮುಖ್ಯ ಕೊಡುಗೆ ನೀಡಿವೆ. ಇದಕ್ಕೆ ಮುಖ್ಯ ಕಾರಣ ಈ ಪ್ರದೇಶಗಳಲ್ಲಿ ವಿಪುಲವಾಗಿದ್ದ ಸಣ್ಣ, ಮಧ್ಯಮ ರಾಜ, ಪಾಳೆಯಗಾರರ ಸಂಸ್ಥಾನಗಳಲ್ಲಿನ ಪಾಳೆಯಗಾರಿ ವ್ಯವಸ್ಥೆ ಮತ್ತು ಮೌಲ್ಯಗಳು .
Explanation:
Hope that it helps you