India Languages, asked by prathapkumar9677, 1 month ago

1.) 3 ಕನ್ನಡ ಸಂಧಿಗಳ ಅರ್ಥ ಹಾಗೂ ಎರಡು ಉದಾಹರಣೆ
ಬರೆಯಿರಿ​

Answers

Answered by gpramachandra69
0

Answer:

ಭಾಷೆ

Download PDF

ವೀಕ್ಷಿಸಿ

ಸಂಪಾದಿಸಿ

ಸ0ಧಿ ಎಂದರೇನು?

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು. ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಒ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.[೧]

ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.[೨]

ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ

Similar questions