India Languages, asked by P9rinkitadivya, 1 year ago

Essay on agriculture in kannada

Answers

Answered by Sanjana5428
305
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು. ಕೃಷಿಯ ಅಧ್ಯಯನಕ್ಕೆ ಕೃಷಿ ವಿಜ್ಞಾನ ಎಂದು ಹೆಸರು. ವೈಶಿಷ್ಟ್ಯಗಳು ಮತ್ತು ಕೌಶಲಗಳ ವಿಸ್ತೃತ ವೈವಿಧ್ಯತೆಯನ್ನು ಕೃಷಿಯು ಒಳಗೊಳ್ಳುತ್ತದೆ.

ಸರಿಸುಮಾರು 10,000 ವರ್ಷಗಳ ಹಿಂದೆ[೨೨] ಬೆಳವಣಿಗೆಯಾದಾಗಿನಿಂದ, ಭೌಗೋಳಿಕವಾಗಿ ಆವರಿಸುವಲ್ಲಿ ಹಾಗೂ ಇಳುವರಿಯನ್ನು ನೀಡುವಲ್ಲಿ ಕೃಷಿಯು ವ್ಯಾಪಕವಾಗಿ ವಿಸ್ತರಿಸಿದೆ. ಈ ವಿಸ್ತರಣೆಯಾದ್ಯಂತ ಹೊಸ ತಂತ್ರಜ್ಞಾನಗಳು ಹಾಗೂ ಹೊಸ ಬೆಳೆಗಳು ಸಂಯೋಜಿಸಲ್ಪಟ್ಟವು. ನೀರಾವರಿಬೆಳೆಗಳ ಸರದಿರಸಗೊಬ್ಬರಗಳು, ಮತ್ತು ಕೀಟನಾಶಕಗಳಂಥ ವ್ಯಾವಸಾಯಿಕ ಅಭ್ಯಾಸಗಳು ಅಥವಾ ಪರಿಪಾಠಗಳು ಬಹಳ ಹಿಂದೆಯೇ ಅಭಿವೃದ್ಧಿಯಾದರೂ, ಕಳೆದ ಶತಮಾನದಲ್ಲಷ್ಟೇ ಅತೀವವಾದ ಪ್ರಗತಿ ಸಾಧಿಸಲು ಅವಕ್ಕೆ ಸಾಧ್ಯವಾಯಿತು. ವಿಶ್ವಾದ್ಯಂತದಸಮಾಜೋ-ಆರ್ಥಿಕ ಬದಲಾವಣೆಯಲ್ಲಿ ವ್ಯಾವಸಾಯಿಕ ಪ್ರಗತಿಯು ಒಂದು ನಿರ್ಣಾಯಕ ಅಂಶವಾಗಿಯೇ ಬೆಳೆದುಕೊಂಡು ಬಂದಿದ್ದರಿಂದಾಗಿ, ಕೃಷಿಯ ಇತಿಹಾಸವು ಮಾನವ ಇತಿಹಾಸದಲ್ಲಿ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ಬೇಟೆಗಾರ-ಸಂಗ್ರಹಕಾರ ಸಂಸ್ಕೃತಿಗಳಲ್ಲಿ ಅಪರೂಪವಾಗಿ ಕಾಣಿಸುವ ಸಂಪತ್ತು-ಕೇಂದ್ರೀಕರಣ ಮತ್ತು ಸೈನಿಕ ಪ್ರವೃತ್ತಿಯ ಅಥವಾ ಅತಿಯಾದ ಕಟ್ಟುನಿಟ್ಟಿನ ತಜ್ಞತೆಗಳು, ಕೃಷಿಯನ್ನು ಕಾರ್ಯರೂಪಕ್ಕೆ ತಂದಿರುವ ಅಥವಾ ಅಭ್ಯಾಸ ಮಾಡುವ ಸಮಾಜಗಳಲ್ಲಿ ಸವೇಸಾಮಾನ್ಯವಾಗಿವೆ. ಆದ್ದರಿಂದ, ಬೃಹತ್-ಸಾಹಿತ್ಯ ಹಾಗೂ ಸ್ಮಾರಕಗಳ ವಾಸ್ತುಶೈಲಿಗಳಂಥ ಕಲೆಗಳು, ಕ್ರೋಡೀಕೃತ ಕಾನೂನು ವ್ಯವಸ್ಥೆಗಳೂ ಸಹ ಇಂಥ ಸಮಾಜಗಳಲ್ಲಿ ಸರ್ವೇಸಾಮಾನ್ಯವಾಗಿವೆ. ತಮ್ಮದೇ ಕುಟುಂಬದ ಅಗತ್ಯಗಳನ್ನು ಪೂರೈಸಿ ಮಿಗುವಷ್ಟು ಆಹಾರ ಪದಾರ್ಥವನ್ನು ಉತ್ಪಾದಿಸಬಲ್ಲಷ್ಟು ರೈತರು ಸಮರ್ಥರಾದಾಗ, ಆಹಾರ ಸಂಗ್ರಹಣೆಯ ಕೆಲಸವನ್ನೂ ಮೀರಿದ ಇತರ ಯೋಜನೆಗಳೆಡೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಅವರ ಸಮುದಾಯದಲ್ಲಿನ ಇತರರಿಗೆ ಮುಕ್ತ ಅವಕಾಶ ನೀಡಲಾಯಿತು. ಕೃಷಿಯ ಅಭಿವೃದ್ಧಿಯಿಂದಾಗಿಯೇ ನಾಗರಿಕತೆಗಳು ಕಾರ್ಯಸಾಧ್ಯವಾದವು ಎಂದು ಇತಿಹಾಸಕಾರರು ಹಾಗೂ ಮಾನವಶಾಸ್ತ್ರಜ್ಞರು ಬಹುಕಾಲದಿಂದ ವಾದಿಸಿದ್ದಾರೆ.
Answered by ArunSivaPrakash
0

An essay on agriculture in Kannada is given below.

  • ಕೃಷಿಯು ಸಸ್ಯಗಳು ಮತ್ತು ಜಾನುವಾರುಗಳನ್ನು ಬೆಳೆಸುವ ವಿಜ್ಞಾನ ಮತ್ತು ಕಲೆಯಾಗಿದೆ. ಕೃಷಿಯ ಇತಿಹಾಸವು ಸಾವಿರಾರು ವರ್ಷಗಳ ಹಿಂದೆ ಪ್ರಾರಂಭವಾಯಿತು, ಆರಂಭಿಕ ಶಿಲಾಯುಗಕ್ಕೂ ಮುಂಚೆಯೇ.
  • ಕೃಷಿ, ಇಲ್ಲದೆ ಮನುಷ್ಯರು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಭೂಮಿಯ ಮೇಲಿನ ಜೀವನವನ್ನು ಉಳಿಸಿಕೊಳ್ಳಲು ನಮ್ಮ ಆಹಾರ ಪೂರೈಕೆಯ ಪ್ರಾಥಮಿಕ ಮೂಲವಾಗಿದೆ.
  • ಕೃಷಿಯ ನಾಲ್ಕು ಮುಖ್ಯ ವಿಧಗಳೆಂದರೆ ಜಾನುವಾರು ಉತ್ಪಾದನೆ, ಬೆಳೆ ಉತ್ಪಾದನೆ, ಕೃಷಿ ಅರ್ಥಶಾಸ್ತ್ರ ಮತ್ತು ಕೃಷಿ ಎಂಜಿನಿಯರಿಂಗ್.
  • ಆಯಾ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕೃಷಿ.
  • ಆಹಾರ ಮತ್ತು ಕಚ್ಚಾ ಸಾಮಗ್ರಿಗಳನ್ನು ಒದಗಿಸುವುದರ ಹೊರತಾಗಿ, ಕೃಷಿಯು ಜನಸಂಖ್ಯೆಯ ಹೆಚ್ಚಿನ ಶೇಕಡಾವಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.
  • ಸಾವಯವ ಕೃಷಿ, ಲಂಬ ಕೃಷಿ, ಬಹು-ಬೆಳೆ ಕೃಷಿ, ಹಸಿರು ಮನೆ ಕೃಷಿ, ಮತ್ತು ಆಟದ ಮನೆ ಕೃಷಿ ಇತ್ಯಾದಿಗಳಂತಹ ವಿವಿಧ ಕೃಷಿ ವಿಧಾನಗಳು ಭೂಮಿಯ ಗಾತ್ರ, ಮಣ್ಣಿನ ಪ್ರಕಾರ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿದೆ.
  • ಏಕಕೃಷಿ, ಅಕ್ವಾಪೋನಿಕ್ಸ್, ಹೈಡ್ರೋಪೋನಿಕ್ಸ್, ಏರೋಪೋನಿಕ್ಸ್, ಇತ್ಯಾದಿ, ಆಧುನಿಕ ಕೃಷಿ ವಿಧಾನಗಳಲ್ಲಿ ಕೆಲವು.

#SPJ3

Similar questions