Saving environment is today's need essay in kannada
Answers
Answer:
ಸುದ್ದಿ
ವಿಡಿಯೋ
ಪ್ರೊ ಕಬಡ್ಡಿ
ಲೈವ್ ಟಿವಿ
ನಗರ
ಕರ್ನಾಟಕ
ಭಾರತ
ಅಂತಾರಾಷ್ಟ್ರೀಯ
ವಾಣಿಜ್ಯ
ಜ್ಯೋತಿಷ್ಯ
ಉದ್ಯೋಗ
ಎನ್ ಆರ್ ಐ
ಅಂಕಣ
ಜೋಕ್ಸ್
ಓದುಗರ ಓಲೆ
Notifications
ಒನ್ ಇಂಡಿಯಾಕನ್ನಡಹಬ್ಬ-ಹರಿದಿನಆಚರಣೆಗಳು
ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ
By ಮಧುರಾ ಹೆಗಡೆ ಕೂಡಗಟ್ಟಿಗೆ
Published:June 4 2015, 19:29 [IST]
ಜೂನ್ ತಿಂಗಳು ಆರಂಭವಾದರೆ ಸಾಕು ಪರಿಸರದ ಕೂಗು ಎದ್ದು ಬಿಡುತ್ತದೆ. ವನಮಹೋತ್ಸವ, ಪರಿಸರ ದಿನಾಚರಣೆ, ಜಾಗೃತಿ ಎಂದೆಲ್ಲಾ ನೂರಾರು ಕಾರ್ಯಕ್ರಮಗಳು ಆರಂಭವಾಗುತ್ತವೆ. ಸ್ವಲ್ಪದಿನ ಸದ್ದು ಮಾಡಿದ ನಂತರ ನಮಗೂ ಪರಿಸರಕ್ಕೂ ಸಂಬಂಧವೇ ಕಡಿತವಾಗಿಬಿಡುತ್ತೆ, ಮತ್ತೆ ಮುಂದಿನ ವರ್ಷ ಪರಿಸರ ದಿನ ಎದುರಾದಾಗಲೇ ಎಲ್ಲ ಸಂಗತಿಗಳು ನೆನಪಿಗೆ ಬರುವುದು!
environment
ಹೌದು... ನಿಜಕ್ಕೂ ಈ ಪ್ರಕೃತಿ ಎಷ್ಟು ಸುಂದರವಾಗಿದೆಯಲ್ಲವೇ? ಸಮುದ್ರ ತೀರದಲ್ಲೋ ಅಥವಾ ಹಸಿರು ಮರಗಳ ನಡುವೆ ಕುಳಿತುಕೊಂಡಾಗ ನಮ್ಮ ಮನಸ್ಸಲ್ಲಿ ಶಾಂತಿ, ಪ್ರೀತಿಯ ಭಾವನೆಗಳು ಆವರಿಸಿಕೊಂಡಿರುತ್ತದೆ. ಆದರೆ ನಾವು ತಂತ್ರಜ್ಞಾನದ ಗಾಲಿಗೆ ಸಿಕ್ಕಿ ಮುಂದೆ ಉರಿಳಿದಂತೆ ಪ್ರಕೃತಿಯೊಡಗಿನ ಬಾಂಧವ್ಯ ಕಡಿಮೆ ಮಾಡಿಕೊಳ್ಳುತ್ತೊದ್ದೇವೆ.
ನಗರದವರ ಕತೆ ಬಿಡಿ, ಹಳ್ಳಿಯ ಯುವಕರಿಗೂ ಅದು ಯಾವ ಮರ? ಇದು ಯಾವ ಜಾತಿಯ ಬಳ್ಳಿ ಎಂಬ ಸಾಮಾನ್ಯ ಜ್ಞಾನವು ಕಡಿಮೆಯಾಗುತ್ತಿದೆ. ಸುತ್ತಲಿನ ವಸ್ತುಗಳನ್ನು ತಿಳಿದುಕೊಳ್ಳಲು ಯಾವ ಕೃಷಿ ಕಾಲೇಜಿನಲ್ಲಿ ಡಿಗ್ರಿ ಪಡೆಯಬೇಕಾಗಿಲ್ಲ. ಮಲೆನಾಡಿನ ವಾಸಿಯಾದ ನಾನು ಪ್ರಶ್ನೆ ಮಾಡುವ ಚಟವನ್ನು ಬೆಳೆಸಿಕೊಂಡಿದ್ದೇನೆ. ಅಪ್ಪ-ಅಮ್ಮನ ಜತೆ ತೋಟಕ್ಕೆ ಹೋದರೆ ಆ ಮರ ಯಾವುದು? ಈ ಗಿಡ ಯಾವುದು ಎಂದು ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ಆದರೆ ಇಂದಿನ ಪೀಳಿಗೆಯಲ್ಲಿ ಈ ತಿಳಿದುಕೊಳ್ಳುವ ಗುಣ ಯಾಕೆ ಮರೆಯಾಗಿದೆ? ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.[ಈ ವಿಶ್ವದಲ್ಲಿ ಬದುಕಲು ಇಚ್ಛೆ ಇದ್ದರೆ ಈ ಟಿಪ್ಸ್ ಪಾಲಿಸಿ]
environment
ತಂತ್ರಜ್ಞಾನದ ಹಾದಿಯಲ್ಲಿ ಸಾಗುತ್ತ ನಮ್ಮ ಸುತ್ತಲಿನ ಚಿಕ್ಕ ಚಿಕ್ಕ ಸಂಗತಿಗಳನ್ನು ಸಂಪೂರ್ಣವಾಗಿ ಮರೆತೇ ಬಿಟ್ಟಿದ್ದೇವೆ. ಮಾವಿನ ಮರ ದಾಸವಾಳದ ಗಿಡ ಗೊತ್ತಿದ್ದರೆ ಸಾಕೆ? ನಿಮ್ಮ ಸ್ನೇಹಿತರ ಬಳಿ ಏನನ್ನು ಸುಮ್ಮನೆ ಒಂದು 20 ಮರಗಳ ಹೆಸರು ಹೇಳಲು ಸವಾಲು ಹಾಕಿ, ಆಗ ಗೊತ್ತಾಗುತ್ತದೆ ನಮ್ಮ ತಿಳಿವಳಿಕೆ ಸಾಮರ್ಥ್ಯ. ಪರಿಸರದ ಬಗ್ಗೆಯೇ ಗೊತ್ತಿಲ್ಲವಾದರೆ ಇನ್ನು ಜಾಗೃತಿ ಮೂಡಿಸುವ ಕೆಲಸ? ನಮ್ಮ ಜೀವನ ಯಾಂತ್ರಿಕತೆ ಒಂದರಲ್ಲೇ ಹೂತಿಕೊಂಡಿದೆ, ಹೂತಿಕೊಳ್ಳುತ್ತಿದೆ. ನಮ್ಮ ಪರಿಸರ ಅಂದುಕೊಳ್ಳುವದನ್ನು ಬಿಟ್ಟು ಯಾರದ್ದೋ ಪರಿಸರ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ.
ನಮ್ಮನ್ನು ನಾವು ಇನ್ನಷ್ಟು ಅರ್ಥಮಾಡಿಕೊಂಡು ಜೀವನದಲ್ಲಿ ಸಾರ್ಥಕತೆ ತೃಪ್ತಿ ಕಾಣಲಾದರೂ ಪರಿಸರದ ಬಗ್ಗೆ ತಿಳಿದುಕೊಳ್ಳಲೇಬೇಕು. ಗೀಜಗನ ಹಕ್ಕಿ ಗೂಡು ಕಟ್ಟುವಾಗ ತನ್ನ ಕಲಾಸಿರಿಯನ್ನು ಮೆರೆಯುತ್ತದೆ. ಆದರೆ ಇದನ್ನು ಆಸ್ವಾದಿಸಲು ನಮಗೆ ಸಮಯವೆಲ್ಲಿದೆ ಹೇಳಿ? ಸಮಯ ಸಿಕ್ಕರೆ ಸಾಕಯ ಮಾಲ್, ಚಿತ್ರ ಮಂದಿರ ಮತ್ತಿನ್ಯಾವುದೋ ಜಾಗ ಅಂಥ ಅಲೆಯುತ್ತೇವೆ, ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಅಲ್ಲಿನ ಕಸ ಕಂಡು ನಾವು ತೆಗೆದುಕೊಂಡು ಹೋಗಿದ್ದ ಎರಡು ಖಾಲಿ ನೀರಿನ ಬಾಟಲಿ ಒಗೆದು 'ಎಷ್ಟು ಗಬ್ಬಾಗಿದೆ' ಎನ್ನುತ್ತಾ ಸರ್ಕಾರವನ್ನು ದೂರಲು ಮರೆಯುವುದಿಲ್ಲ.
ನಮ್ಮ ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಸಾಕಾಗಿ ಹೋದ ಭೂತಾಯಿಯೂ ಸಣ್ಣ ಅಸಮಾಧಾನ ತೋರಿಸಿದ್ದಾಳೆ. ನೇಪಾಳ ಭೂಕಂಪ ಭೂತಾಯಿಯ ಆರ್ತನಾದದ ಆರಂಭ. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯು ಮಾಲಿನ್ಯ, ಜಲ ಮಾಲಿನ್ಯ ಎಲ್ಲಕ್ಕೂ ಬೆಲೆ ತೆರುವ ಕಾಲ ಬಹಳ ದೂರವಿಲ್ಲ. ಇನ್ನು ಕಾಲ ಮುಂಚಿಲ್ಲ. ಇವತ್ತಿನಿಂದಲೇ ಪರಿಸರದ ಆಗು ಹೊಗುಗಳನ್ನು ಅರಿಯಲು ಆರಂಭಿಸೋಣ. ಮುಂದಿನ ಪೀಳಿಗೆಗೆ ತಿಳಿವಳಿಕೆ ನೀಡುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳೋಣ