Social Sciences, asked by ishtyak5827, 1 year ago

some information about peacock in kannada essay

Answers

Answered by NishantKing1
9
ಗಂಡು ನವಿಲು ಕಾಮನ ಬಿಲ್ಲಿನ
ಬಣ್ಣ ಗಳಂತೆ ಆಕರ್ಷಕವಾದ ಗರಿಗಳನ್ನು ಹೊಂದಿರುತ್ತದೆ. ಅವುಗಳಲ್ಲಿ ಮುಖ್ಯವಾಗಿ ನೀಲಿ ಹಸಿರು ಮಿಶ್ರಿತ ಅಥವಾ ಹೊಳಪಿನ ಹಸಿರು ಬಣ್ಣದ ಗರಿ ಗಳನ್ನು ಹೊಂದಿರುತ್ತದೆ. ಉದ್ದನೆಯ ಗರಿಗಳ ಗುಚ್ಛವು ಹೃದಯದ ಆಕಾರದಲ್ಲಿ ಕೊನೆಗೊಂಡಿರುತ್ತದೆ. ಅಲ್ಲದೆ ಅದರ ಮಧ್ಯದಲ್ಲಿ ಕಣ್ಣಿನ ಆಕಾರವಿರುತ್ತದೆ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿಗೆದರಿ ನೃತ್ಯ ಮಾಡುವಾಗ ಇದು ಸುಂದರವಾಗಿ ಕಾಣುತ್ತದೆ [೩] .it dance
ಗಂಡು ನವಿಲು ಬಹಳ ಸುಂದರವಾಗಿ, ಆಕರ್ಷಕವಾಗಿರುತ್ತದೆ. ಹೆಣ್ಣು ನವಿಲು ಗಂಡು ನವಿಲಿನಷ್ಟು ಆಕರ್ಷಕವಾಗಿರುವುದಿಲ್ಲ. ಇವು ಮಸುಕಾದ ಹಸಿರು, ಬೂದು ಮತ್ತು ಕಂದು ಬಣ್ಣ ಮಿಶ್ರಿತ ಗರಿಗಳ ಗುಚ್ಛವನ್ನು ಹೊಂದಿರುತ್ತವೆ. ಆದರೆ ಗಂಡು ಮತ್ತು ಹೆಣ್ಣು ನವಿಲುಗಳೆರಡೂ ತಮ್ಮ ತಲೆಯ ಮೇಲೆ ಮುಕುಟವನ್ನು ಹೊಂದಿರುತ್ತವೆ. ಕೆಲವೊಮ್ಮೆ ಹೆಣ್ಣು ನವಿಲು ತನ್ನ ಮುಕುಟ ಅಥವಾ ಚೊಟ್ಟಿ ಅಥವಾ ಜುಟ್ಟನ್ನು ತನ್ನ ಮರಿಗಳ ರಕ್ಷಣೆಗಾಗಿ ಉಪಯೋಗಿಸುತ್ತದೆ.
ನೇರಳೆ
ಇಲ್ಲವೇ ಮಿಲನದ ಸಮಯದಲ್ಲಿ ಬೇರೆ ಹೆಣ್ಣುಗಳನ್ನು ಗದರಿಸಿ ಓಡಿಸಲೂ ಬಳಸುತ್ತದೆ. ಭಾರತೀಯ ನವಿಲು ಮುಖ್ಯವಾಗಿ ಹೊಳಪಿನ ನೀಲಿ ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಅಲ್ಲದೆ ಗರಿಗಳು ತುದಿಯಲ್ಲಿ ಡೊಂಕಾಗಿರುವ ತಂತಿಯಾಕಾರದಲ್ಲಿರುತ್ತವೆ. ಹೆಣ್ಣು ನವಿಲು ಹಸಿರು ಬಣ್ಣದ ಕುತ್ತಿಗೆ ಹಾಗೂ ಮಸುಕು ಕಂದು ಬಣ್ಣದ ಚಿಕ್ಕ ಗರಿಗಳ ಗುಚ್ಛವನ್ನು ಹೊಂದಿರುತ್ತದೆ.
ನೋಡಲು ಹಸಿರು ನವಿಲು ಭಾರತೀಯ ನವಿಲಿಗಿಂತ ಬೇರೆಯಾಗಿರುತ್ತದೆ. ಗಂಡು ಹಸಿರು ನವಿಲು ಹಸಿರು ಮತ್ತು ಬಂಗಾರದ ಬಣ್ಣಗಳಿರುವ ಗರಿಗಳನ್ನು ಹೊಂದಿದ್ದು, ನೆಟ್ಟಗಿರುವ ಮುಕುಟವನ್ನು ಹೊಂದಿರುತ್ತದೆ. ಅಲ್ಲದೆ ಸಣ್ಣ ಗರಿಗಳನ್ನು ಹೊರತು ಪಡಿಸಿದರೆ ಹೆಣ್ಣು ನವಿಲು ಗಂಡು ನವಿಲಂತೆಯೇ ಇರುತ್ತದೆ. ಮತ್ತು ಹೆಣ್ಣು ನವಿಲಿನ ಗರಿಗಳ ಬಣ್ಣದ ತೀಕ್ಷ್ಣತೆ ಗಂಡು ನವಿಲಿಗಿಂತಾ ಕಡಿಮೆ ಇರುತ್ತದೆ. ಆದರೆ ಗಂಡು ಮರಿ ನವಿಲು ಮತ್ತು ಬೆಳೆದ ಹೆಣ್ಣು ನವಿಲು ಒಂದೇ ತೆರನಾಗಿ ಕಾಣುತ್ತವೆ.
ಕಾಂಗೋ ನವಿಲು ಗಾಢವಾದ ನೀಲಿ, ಅದಿರಿನ ಹಸಿರು ಮತ್ತು ಸ್ವಲ್ಪ ನೇರಳೆ ಬಣ್ಣಗಳ ಮಿಶ್ರಣವಿರುವ ಗರಿಗಳ ಗುಚ್ಛವನ್ನು ಹೊಂದಿರುತ್ತದೆ. ಕೆಂಬಣ್ಣದ ಕತ್ತು, ಬೂದು ಬಣ್ಣದ ಕಾಲು ೧೪ ಸಣ್ಣ ಕಪ್ಪು ಗರಿಗಳ ಗುಚ್ಛವನ್ನೂ ಹೊಂದಿರುತ್ತದೆ. ಅಲ್ಲದೆ ನೇರವಾದ ಬಿಳಿಯ ಕೂದಲಿನಂತಹಾ ಮುಕುಟವನ್ನು ಹೊಂದಿರುತ್ತದೆ. ಹೆಣ್ಣು ನವಿಲು ಸಾಧಾರಣವಾಗಿ ಕಂದು ಬಣ್ಣವಿದ್ದು, ಕಪ್ಪಾದ ಹೊಟ್ಟೆಯನ್ನು ಹೊಂದಿರುತ್ತದೆ. ಅದಿರು ಹಸಿರಿನ ಬೆನ್ನು ಮತ್ತು ಸಣ್ಣ ಬಾದಾಮಿ ಯಾಕಾರದ ಕಂದು ಮುಕುಟವನ್ನು ಹೊಂದಿರುತ್ತದೆ. ಬೇರೆ ನವಿಲುಗಳಿಗಿಂತ ಕಾಂಗೋ ನವಿಲುಗಳು ತುಂಬಾ ಆಕರ್ಷಣೀಯವಾಗಿರುತ್ತವೆ.
......... .......

Hope it helps you.......
Pls Mark as Brainliast........ Plzzzzzzz.....
Similar questions