World Languages, asked by pari200414, 1 year ago

yoga and health kannada essay​

Answers

Answered by nahush72
21

ಯೋಗಾಭ್ಯಾಸವು ಒಂದು ಆಧ್ಯಾತ್ಮಿಕ ಆಚರಣೆ ಎಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇಕೆ, ಅದು ಚಿರಂತನ ಮತ್ತು ಪರಿಪೂರ್ಣ ಸತ್ಯವೇ ಆದ ಆ ಭಗವಂತನೆಡೆಗೆ ಸಾಗುವುದಕ್ಕಿರುವ ಒಂದು ಅತಿಶಯವಾದ ಕಾರ್ಯಸಾಧ್ಯ ಮಾರ್ಗೋಪಾಯವೂ ಹೌದು. ಆದ್ದರಿಂದಲೇ ಯೋಗಾಭ್ಯಾಸವನ್ನು ಇಡೀ ಮಾನವಕುಲದ ಸ್ವತ್ತು ಎಂದೇ ಪರಿಗಣಿಸಲಾಗುತ್ತದೆ. ಯೋಗವೆಂಬುದು ಸ್ವತಃ ತನ್ನತನದೊಂದಿಗೆ ಮತ್ತು ಅದರ ಯುಕ್ತವಾದ ಚಹರೆಯೊಂದಿಗೆ ಮೌನಸಂವಾದ ನಡೆಸುವ ಒಂದು ಪ್ರಕ್ರಿಯೆ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆ. ಆತ್ಮದ ಅಥವಾ ತನ್ನತನದ ಕುರಿತಾದ ಅಜ್ಞಾನ, ಐಹಿಕ ವಸ್ತುಗಳೊಂದಿಗೆ ಮತ್ತು ಅದರ ಸಂಬಂಧವಾದ ಆಲೋಚನೆಗಳೊಂದಿಗೆ ಅಂಟಿಕೊಳ್ಳುವುದೇ ಮನುಷ್ಯ ಅನುಭವಿಸುವ ನೋವು ಹಾಗೂ ಕಡುಕಷ್ಟಗಳಿಗೆ ಕಾರಣ. ಯೋಗವನ್ನು ಸಮರ್ಪಕವಾಗಿ ಅಭ್ಯಾಸ ಮಾಡುವುದರಿಂದ ಈ ನೋವು ಮತ್ತು ಸಮಸ್ಯೆಗಳು ತಗ್ಗುವುದಲ್ಲದೆ, ಮನುಷ್ಯ ಹಾಗೂ ಭಗವಂತನ ನಡುವಿನ ಕಳಚಿದ ಕೊಂಡಿಯನ್ನು ಪುನರ್‌ಸ್ಥಾಪಿಸಲು ಸಾಧ್ಯವಾಗುತ್ತದೆ.

ಏಕವಿಶ್ವ ಮತ್ತು ಮಾನವ ಕುಲದ ಏಕತೆಯ ಪರಿಕಲ್ಪನೆಯು ತೀವ್ರಗತಿಯನ್ನು ಕಂಡುಕೊಳ್ಳುತ್ತಿರುವುದಕ್ಕೆ ಈ ಶತಮಾನ ಸಾಕ್ಷಿಯಾಗಿದೆ. ಹೀಗಾಗಿ ಸಾಂಸ್ಕೃತಿಕ ಮೌಲ್ಯಗಳು, ವೈಜ್ಞಾನಿಕ ಜ್ಞಾನ ಹಾಗೂ ಮಾನವ ಕುಲದ ಇನ್ನೂ ಅನೇಕ ಅಂಶಗಳು ಪೂರ್ವದ ಮತ್ತು ಪಶ್ಚಿಮದ ದೇಶಗಳ ನಡುವೆ ಪರಸ್ಪರ ವಿನಿಮಯವಾಗುವಂತಾಗಿದೆ. ಜೂನ್ 21, ಅಂತಾರಾಷ್ಟ್ರೀಯ ಯೋಗದಿನವಾಗಿ ಘೋಷಿಸಲ್ಪಡುವುದಕ್ಕೆ ದೇಶ-ವಿದೇಶಗಳ ಸಮುದಾಯಗಳಲ್ಲಿ ಯೋಗದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವುದೇ ಕಾರಣ.

ಜಗವ ಗೆದ್ದ ಯೋಗ: ಯೋಗಾಭ್ಯಾಸದ ಕುರಿತಾದ ಭರವಸೆ ಮತ್ತು ವಿಶ್ವಾಸಗಳು ಹೆಚ್ಚುತ್ತಿರುವುದೇ ಕಾರಣ.ವಾಸ್ತವವಾಗಿ ಹೇಳಬೇಕೆಂದರೆ, ಯೋಗ ಎಂಬುದು ಶರೀರ, ಮನಸ್ಸು ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುತ್ತದೆ ಹಾಗೂ ನಮ್ಮನ್ನು ನಾವು ಕಂಡುಕೊಳ್ಳುವುದಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಇಂದಿನ ವೇಗದ ಯುಗದಲ್ಲಿ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಮಯ ಸಿಗುತ್ತದೆಯೇ ಎಂಬುದು ಕೆಲವೊಬ್ಬರ ಪ್ರಶ್ನೆಯಿರಬಹುದು. ಯೋಗಾಭ್ಯಾಸಕ್ಕೆ ದಿನಗಟ್ಟಲೆ, ಗಂಟೆಗಟ್ಟಲೆ ಸಮಯವೇನೂ ಅಗತ್ಯವಿಲ್ಲ; ಸಣ್ಣ ಕಾಲಾವಧಿಯಿಂದ ಪ್ರಾರಂಭಿಸಿ, ನಂತರ ಇಚ್ಛೆ ಮತ್ತು ಅಗತ್ಯಕ್ಕೆ ತಕ್ಕಂತೆ ಅಭ್ಯಾಸವನ್ನು ವಿಸ್ತರಿಸಿಕೊಳ್ಳಲು ವಿಪುಲ ಅವಕಾಶವಿದೆ. ಜೀವನದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದ, ಸಂತೋಷ, ಯಶಸ್ಸು ಎಲ್ಲವೂ ಕೈಗೂಡಬೇಕೆಂದರೆ, ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಯೋಗಕ್ಕೆ ಮೊರೆಹೋಗುವುದು ಜಾಣತನದ ನಿರ್ಧಾರ ಎನಿಸಿಕೊಳ್ಳುತ್ತದೆ.ಯೋಗವು ದೇಹದ ಆರೋಗ್ಯವನ್ನು ಕಾಪಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಿಮ್ಮ ಮೂಳೆ ಸ್ನಾಯುಗಳನ್ನು ಚುರುಕು ಮತ್ತು ಚಟುವಟಿಕೆಗೊಳಿಸಲು ಯೋಗ ಸಹಕಾರಿ. ಯೋಗಭ್ಯಾಸದ ನಿರಂತರತೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಬಳಲಿಕೆ, ಸುಸ್ತು, ನಿಮ್ಮಿಂದ ದೂರವಾಗಿ ಚಟುವಟಿಕೆ ನಿಮ್ಮ ಜತೆಗೂಡುತ್ತದೆ. ಹೊಟ್ಟೆ ಬೊಜ್ಜು ಕರಗಿಸಲು ಇರುವ ಅತ್ಯದ್ಭುತ ಯೋಗಾಸನಗಳು

Answered by qwcricket10
1

ಯೋಗವು ಶಾಂತಿಯುತ ದೇಹ ಮತ್ತು ಮನಸ್ಸನ್ನು ಪಡೆಯಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ತರುತ್ತದೆ.

  • ಯೋಗಾಭ್ಯಾಸದಿಂದ ತಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯಕರ ರೀತಿಯಲ್ಲಿ ಇಟ್ಟುಕೊಳ್ಳಬಹುದು ಮತ್ತು ಶಾಂತಿಯುತ ಜೀವನವನ್ನು ಹೊಂದಬಹುದು.
  • ಇದು ಸಾವಿರಾರು ವರ್ಷಗಳ ಹಿಂದೆ ಆಧ್ಯಾತ್ಮಿಕ ಅಭ್ಯಾಸವಾಗಿ ಪ್ರಾರಂಭವಾಯಿತು.
  • ಯೋಗವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡಲು ಅಥವಾ ನಿವಾರಿಸಲು ಸಹಾಯ ಮಾಡುತ್ತದೆ.
  • ಯೋಗವು ಜನರು ತಮ್ಮ ರಕ್ತದೊತ್ತಡ, ಒತ್ತಡ, ಜೀರ್ಣಕಾರಿ ಸಮಸ್ಯೆಗಳು ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಮಾನವರು ತಮ್ಮ ಆತ್ಮವಿಶ್ವಾಸ, ಏಕಾಗ್ರತೆ, ಸಮನ್ವಯ ಇತ್ಯಾದಿಗಳನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
  • ಹೀಗಾಗಿ ಯೋಗ ಮತ್ತು ಆರೋಗ್ಯವು ಒಂದಕ್ಕೊಂದು ಸಂಬಂಧಿಸಿದೆ, ಯೋಗದ ಸರಿಯಾದ ಅಭ್ಯಾಸವು ನಮ್ಮನ್ನು ಆರೋಗ್ಯಕರ ಮತ್ತು ಬಲಶಾಲಿಯಾಗಿರಿಸುತ್ತದೆ.
  • ಆರೋಗ್ಯಕರ ಮತ್ತು ಶಾಂತಿಯುತ ಜೀವನವನ್ನು ನಡೆಸಲು ನೈಸರ್ಗಿಕ ಮಾರ್ಗವೆಂದರೆ ನಿಯಮಿತವಾಗಿ ಯೋಗವನ್ನು ಅಭ್ಯಾಸ ಮಾಡುವುದು.

#SPJ6

Similar questions