CBSE BOARD X, asked by sanjeevkumars8896, 11 months ago

Please send me essay on importance of sports in Kannada. About 12 lines

Answers

Answered by yadav9sakshi
2

ಆಟ! ಜೀವನವೇ ಒಂದು ತರಹ ಆಟವಲ್ಲವೆ? ‘‘ಬೊಂಬೆಯಾಟವಯ್ಯಾ’’ ಅನ್ನುವ ಹಾಡಿನ ಬಗ್ಗೆ ಹೇಳಲು ಹೊರಟಿಲ್ಲ, ನಾನು. ಬಾಳಿನುದ್ದಕ್ಕೂ ನಮ್ಮ ಎಲ್ಲ ಚಲನವಲನಗಳನ್ನ ಚಟುವಟಿಕೆಗಳನ್ನ ಕ್ರೀಡಾಮನೋಭಾವದಿಂದ ನಡೆಸುವುದರಿಂದ ಏನೆಲ್ಲಾ ಎಷ್ಟೆಲ್ಲಾ ಪ್ರಯೋಜನವಿದೆ- ಎಂಬುದರ ಬಗ್ಗೆ ನಿಮ್ಮ ಗಮನ ಸೆಳೆಯಬಯಸುತ್ತಿದ್ದೇನೆ. ಕನ್ನಡದಲ್ಲಂತೂ ಬಹುತೇಕ ನಮ್ಮ ನಿತ್ಯ ಜೀವನದ ಎಲ್ಲಾ ಚಟುವಟಿಕೆಗಳು ಒಂದಲ್ಲ ಒಂದು ತರಹಾ ‘ಆಟ’ವೇನೇ! ನಾವು ‘ಮಾಡು’ವುದೆಲ್ಲವೂ’ ‘ಆಟ’ದಲ್ಲೇ ಅಂತ್ಯವಾಗುವಂತಹವು! ಓಡಾಟ, ನಡೆದಾಟ, ಅಲೆದಾಟ, ತಿರುಗಾಟ, ಸುತ್ತಾಟ; ತಡಕಾಟ, ಕುಲುಕಾಟ, ಒದ್ದಾಟ, ತೊಳಲಾಟ, ಕೂಗಾಟ, ಕಿರುಚಾಟ, ಹೊಡೆದಾಟ, ಬಡಿದಾಟ, ಕಾದಾಟ, ಗುದ್ದಾಟ, ಬಿದ್ದಾಟ, ಕಚ್ಚಾಟ, ಕಿತ್ತಾಟ, ತಿಕ್ಕಾಟ, ನುಗ್ಗಾಟ; ಹಾರಾಟ, ತೂರಾಟ, ತೇಲಾಟ, ಓಲಾಟ, ಜೋಲಾಟ, ತುಂಟಾಟ, ಚಿನ್ನಾಟ, ಚಲ್ಲಾಟ-ಗಳೆಲ್ಲವೂ ಒಂದಲ್ಲ ಒಂದು ಬಗೆಯ ಚಿಕ್ಕಾಟ, ಸಣ್ಣಾಟ, ದೊಡ್ಡಾಟ ಇಲ್ಲವೇ ಬಯಲಾಟಗಳೇ. ನಾವು ಮಕ್ಕಳಾಗಿದ್ದಾಗಲೇ ಇದು ಶುರು. ‘‘ನಮ್ಮ ಮಕ್ಕಳು ಚಿಕ್ಕಂದಿನಿಂದಲೇ ಕ್ರಮಬದ್ಧವಾದ ಕ್ರೀಡೆಗಳಲ್ಲಿ ಹೆಚ್ಚುಹೆಚ್ಚಾಗಿ ಭಾಗವಹಿಸಬೇಕು. ಏಕೆಂದರೆ, ಅವರ ಸುತ್ತಲೂ ಅಂತಹ ವಾತಾವರಣ ಇಲ್ಲದೇ ಹೋದರೆ ಅವರುಗಳು ಎಂದೂ ಸದ್ವರ್ತನೆಯ ಗುಣಶೀಲ ನಾಗರಿಕರಾಗಿ ಬೆಳೆಯಲಾರರು’’- ಇದು ಗ್ರೀಕ್‌ ತತ್ವಜ್ಞಾನಿ ಸಾಕ್ರಟಿಸ್‌ನ ಅಭಿಪ್ರಾಯ. ‘‘ಮಕ್ಕಳ ಕ್ರೀಡೆಗಳ ಸಮರ್ಪಕ ನಿರ್ದೇಶನದಿಂದಲೇ ವಿದ್ಯಾಭ್ಯಾಸ ಆರಂಭವಾಗಬೇಕು. ಇದಕ್ಕೆ ಕಾರಣವಿದೆ, ಬಾಲ್ಯದ ಆಟಗಳಿಗೂ, ಮುಂದೆ ಮಕ್ಕಳು ಬೆಳೆದು ದೊಡ್ಡವರಾದಾಗ ಅವರು ಅನುಸರಿಸಬೇಕಾದ ಕಾನೂನಿನ ಪಾಲನೆ ಅಥವಾ ಶಾಸನ-ಭಂಗಕ್ಕೂ ನಿಕಟ ಸಂಬಂಧ ಇದೆ.’’- ಹೀಗೆ ಹೇಳಿದ್ದು ಗ್ರೀಕ್‌ ದಾರ್ಶನಿಕ ಪ್ಲೇಟೊ. ಬೇಟೆಯೇ ಬಹುಶಃ ಮಾನವನ ಮೊದಲ ಆಟ ಆಗಿರಬಹುದು. ಓಡಿ ಬೆನ್ನಟ್ಟುವುದು, ಜಿಗಿಯುವುದು, ನೆಗೆಯುವುದು, ನೀರಿನಲ್ಲಿ ಈಜುವುದು. ಹೀಗೆ ಜೀವನದ ಅನಿವಾರ್ಯ ಕ್ರಿಯೆಗಳೇ ಮುಂದೆ ಆಟದ ರೂಪ ಪಡೆದವು. ಆಮೇಲೆ ಬಂತು ಮಲ್ಲಯುದ್ಧ. ಸಾಹಸಿಗಳಿಗೇ ಉಳಿವು ಎಂಬ ಕಾಲವೊಂದಿತ್ತು. ಅಂದಿನ ಸಮಾಜದಲ್ಲಿ ಬಲಶಾಲಿಗಳಿಗೇ ಗೌರವ, ಶಕ್ತಿವಂತರಿಗೆ ಅವರ ಕ್ರಿಯಾಸಂಪನ್ನತೆಗೇ ಮನ್ನಣೆ ಸಹಜವಾಗಿತ್ತು. ಒಲಿಂಪಿಕ್‌ ಕ್ರೀಡೆಗಳು ಪ್ರಾರಂಭವಾದದ್ದು, ಗ್ರೀಕ್‌ ದಂತ ಕಥೆಗಳ ಪ್ರಕಾರ ಕ್ರಿ. ಪೂ. 1253. ಭಾರತದಲ್ಲೇ ನೋಡಿ, ಸಿಂಧೂ ನದಿ ಕಣಿವೆ ನಾಗರೀಕತೆಯಲ್ಲೂ, ಸುಮಾರು 4500 ವರ್ಷಗಳ ಹಿಂದೆಯೂ ಸಹ ಈ ನೆಲದ ಮಕ್ಕಳು ಆಡುತ್ತಿದ್ದ ಆಟಿಕೆಗಳ ಅವಶೇಷಗಳು ಸಿಕ್ಕಿವೆ. ವೇದ ಕಾಲದಲ್ಲಿ ಜೂಜಾಟ, ಪಗಡೆಯಾಟ, ಧನುರ್‌ವಿದ್ಯೆ, ಬೇಟೆ, ಕುದುರೆ ಸವಾರಿ, ಅಂಗಸಾಧನೆ, ಓಟ, ಈಜು, ಮತ್ತಿತರ ಕ್ರೀಡೆಗಳಿಗೆ ಪ್ರಾಮುಖ್ಯವಿತ್ತು. ಭಾರತದ ಪ್ರಾಚೀನ ವಿಶ್ವವಿದ್ಯಾನಿಲಯ (ಉದಾಹರಣೆಗೆ ನಲಂದಾ ಮತ್ತು ತಕ್ಷಶಿಲಾ) ಗಳಲ್ಲಿ ಶರೀರ ಬಲ ಸಂವರ್ಧನೆಗೆ ಅಗತ್ಯವಾದ ಹಲವು ಕ್ರೀಡೆಗಳನ್ನು ದಿನನಿತ್ಯ ಕಲಿಸುತ್ತಿದ್ದರು ಎಂಬುದಕ್ಕೆ ಆಧಾರ ಇದೆ. ಬೆಳಗ್ಗೆ ಈಜು, ಪ್ರಾಣಯಾಮ, ಯೋಗಾಸನ, ಸೂರ್ಯನಮಸ್ಕಾರ ಅಮೇಲೆ ಜಿಗಿತ, ಚೆಂಡಾಟ ಕಹಳೆ ಊದುವುದು ನಕಲಿ ನೇಗಿಲು ಉಳುವ ಸ್ಪರ್ಧೆ, ಬಿಲ್ಲುಗಾರಿಕೆ, ಗೋಲಿ ಆಟ, ರಥ ಓಡಿಸುವುದು, ಆನೆ ಸವಾರಿ, ಕತ್ತಿವರಸೆ, ಕುದುರೆ ಹಾಗೂ ಇತರ ರಥಗಳ ಮುಂದೆ ಓಡುವುದು ಕುಸ್ತಿ, ಮುಷ್ಠಿಯುದ್ಧ- ಇವೆಲ್ಲಾ ಅಲ್ಲಿ ದಿನವೂ ವಿದ್ಯಾರ್ಥಿಗಳು ಆಡುತ್ತಿದ್ದ ಆಟಗಳು. (ಸಂಸ್ಕೃತದಲ್ಲಿ ಕ್ರೀಡಾ, ಕೇಳೀ, ಖೇಲಾ, ಖೇಲನ, ಖೇಳನ, ಕೂರ್ದನ, ಲೀಲಾ- ಎಂಬ ‘ಆಟ’ದ ಪದಗಳಿವೆ.) ನಲಂದಾದಲ್ಲಿ ಸ್ಪರ್ಧೆಗಳಿಗಾಗಿಯೇ ಕ್ರೀಡಾಂಗಣ ಇತ್ತು- ಎನ್ನುತ್ತಾರೆ, ಸಂಶೋಧಕರು. ನಿರಂಜನರ ಸಂಪಾದಕತ್ವದಲ್ಲಿ ಹೊರಬಂದ ‘ಜ್ಞಾನಗಂಗೋತ್ರಿ- ಕಿರಿಯರ ವಿಶ್ವಕೋಶ’ದ ‘ಕ್ರೀಡೆ ಮತ್ತು ಮನೋಲ್ಲಾಸ’ ದ ಸಂಪುಟದಲ್ಲಿ ಸಮೀಕ್ಷಿಸಿರುವಂತೆ, ಮೇಲೆ ಹೇಳಿರುವುದೇ ನಮ್ಮ ಭಾರತೀಯ ಶರೀರ ಶಿಕ್ಷಣದ ಬುನಾದಿ- ಎನ್ನಬಹುದು.


Similar questions